ಮಡಿಕೇರಿ: ಗುಡ್ಡ ಕುಸಿತ ಹಾಗೂ ಮಳೆಯಿಂದ ಭಾರೀ ಅನಾಹುತ ಸೃಷ್ಟಿತಯಾಗಿದ್ದ ಕೊಡಗಿನ ಜನರ ಸಂಪೂರ್ಣ ಸಾಲಮನ್ನಾ ಮಾಡಿಕೊಡುವಂತೆ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರಲ್ಲಿ ಮನವಿಮಾಡಿಕೊಂಡಿದ್ದಾರೆ.ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ ಕೊಡಗಿನಲ್ಲಿ 1709 ಮನೆಗಳಿಗೆ ಪರಿಹಾರ ಕಾರ್ಯವನ್ನು ಎನ್‍ಡಿಆರ್‍ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ)ದಿಂದ ಕೊಡಲಾಗಿದೆ. ಅದು ಗರಿಷ್ಠ ಅಂದ್ರೆ 1 ಲಕ್ಷ ಅರೆಬರೆ ಡ್ಯಾಮೇಜ್ ಆದವರಿಗೆ 50,00 ಅಥವಾ 75,000 ಇರಬಹುದು. ಹೀಗೆ ಒಟ್ಟಾರೆ ಮೊತ್ತ 5,45,37,541 ರೂ. ವನ್ನು ಎನ್ ಡಿಆರ್ ಎಫ್  ನಲ್ಲಿ ಅನುದಾನ ಕೊಡಲಾಗಿದೆ ಅಂತ ವಿವರಿಸಿದ್ರು.ಮುಂದಿನ 3 ತಿಂಗಳ ಕಾಲ ಕ್ರಾಪ್ ಲೋನ್ ಅಥವಾ ಟರ್ಮ್ ಲೋನ್ ವಸೂಲಾತಿಗೆ ಇಡೀ ಕೊಡಗಿನಲ್ಲಿ ಎಲ್ಲೂ ಹೋಗಕೂಡದು. ಕೊಡಗಿನಲ್ಲಿ 6 ಪಂಚಾಯ್ತಿ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿತ ಹಾಗೂ ಮಳೆಯಿಂದಾದ ಅನಾಹುತಗಳು ಜಾಸ್ತಿ ಇವೆ. ಇಡೀ ಕೊಡಗಿನಾದ್ಯಂತ ಧಾರಕಾರವಾಗಿ ಸುರಿದಂತಹ ಮಳೆಯಿಂದಾಗಿ ಕಾಫಿ, ಮೆಣಸು ಎಲ್ಲವೂ ಸಂಪೂರ್ಣವಾಗಿ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಒಕ್ಕೋರಲಿನಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ ಅಂತ ಹೇಳಿದ್ರು.3 ತಿಂಗಳ ಕಾಲ ಸಾಲ ವಸೂಲಾತಿಗೆ ಹೋಗಬೇಡಿ ಅಂತ ಈಗಾಗಲೇ ಹೇಳಿದ್ದೇವೆ. ಈ ಮೂರು ತಿಂಗಳೊಳಗೆ ಕೊಡಗಿಗೆ ಬೇಕಾದಂತಹ ಎಲ್ಲಾ ವ್ಯವಸ್ಥೆಗಳನ್ನು ಮಾಡಿ, ಈ ವರ್ಷ ಕೊಡಗಿನ ಸಂಪೂರ್ಣ ಸಾಲ ಮನ್ನಾ ಮಾಡಿ ಅಂತ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿಕೊಂಡರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


