ಬೆಂಗಳೂರು: ಹರಿಪ್ರಿಯಾ ‘ಕನ್ನಡ್ ಗೊತ್ತಿಲ್ಲ’ ಎಂಬ ಚಿತ್ರದಲ್ಲಿ ನಟಿಸಲು ತಯಾರಾಗಿರೋ ಸುದ್ದಿ ಇತ್ತೀಚೆಗಷ್ಟೇ ಜಾಹೀರಾಗಿತ್ತು. ಆರ್‍ಜೆ ಮಯೂರ್ ನಿರ್ದೇಶನ ಮಾಡಲಿರೋ ಈ ಮೊದಲ ಚಿತ್ರದ ಬಗ್ಗೆ ಈಗಾಗಲೇ ಎಲ್ಲೆಡೆ ನಿರೀಕ್ಷೆಗಳು ಶುರುವಾಗಿವೆ. ಇದರ ಜೊತೆ ಜೊತೆಗೇ ಮತ್ತೊಂದು ಸುದ್ದಿಯೂ ಹರಿದಾಡಲಾರಂಭಿಸಿದೆ.ಈ ಚಿತ್ರದ ಕಥೆಯನ್ನು ಆರಂಭದಲ್ಲಿಯೇ ರಚಿತಾ ರಾಮ್ ಕೇಳಿದ್ದರಂತೆ. ಆದರೆ ಕಾರಣಾಂತರಗಳಿಂದ ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿರಲಿಲ್ಲ. ಅದಾಗಿ ಒಂದಷ್ಟು ಕಾಲ ತಟಸ್ಥರಾಗಿದ್ದ ಆರ್ ಜೆ  ಮಯೂರ್ ಅವರ ಕಥೆಯನ್ನು ಹರಿಪ್ರಿಯಾ ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆಂಬ ಸುದ್ದಿ ಹರಡಿಕೊಂಡಿದೆ.ಇದೆಲ್ಲ ಏನೇ ಇದ್ದರೂ ಕೂಡಾ ಇದೊಂದು ಕನ್ನಡಾಭಿಮಾನ ಹುಟ್ಟಿಸುವ ಭಿನ್ನವಾದ ಕಥೆ ಹೊಂದಿರೋ ಚಿತ್ರವೆಂಬ ಸುಳಿವು ಈಗಾಗಲೇ ಸಿಕ್ಕಿದೆ. ಇದು ಬೆಂಗಳೂರಿನಲ್ಲಿ ಕನ್ನಡವನ್ನೇ ನುಂಗಿ ಬೆಳೆಯುತ್ತಿರುವ ಪರಭಾಷಾ ಹಾವಳಿಯ ವಿರುದ್ಧ ಒಂದು ಮನಸ್ಥಿತಿಯನ್ನು ಸಿದ್ಧ ಮಾಡುವಲ್ಲಿಯೂ ಪಾತ್ರ ವಹಿಸಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಬೇರೆ ರಾಜ್ಯಗಳಿಂದ ಇಲ್ಲಿಗೆ ಬರುವವರು ರಾಜಾ ರೋಷವಾಗಿಯೇ ಕನ್ನಡ್ ಗೊತ್ತಿಲ್ಲ ಅಂತಾರೆಯೇ ವಿನಃ ಕನ್ನಡ ಕಲಿಯಲು ಪ್ರಯತ್ನಿಸೋದು ವಿರಳ. ಇಂಥಾ ದುರಂತಗಳ ಸುತ್ತ ಸುತ್ತೋ ಈ ಕಥೆ ಅದರಾಚೆಗೂ ಬೇರೇನನ್ನೋ ಹೊಂದಿದೆಯಂತೆ. ಅದೇನು ಎಂಬ ಅಚ್ಚರಿಯನ್ನು ಹಾಗೇ ಉಳಿಸಿಕೊಂಡು ಈ ಚಿತ್ರಕ್ಕೆ ಚಾಲನೆ ಸಿಗೋ ಕಾಲ ಹತ್ತಿರಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvFor clarification… @HariPrriya6 pic.twitter.com/VPZIYutiJp— RJ Mayuraa Raghavendra (@RjMayuraa) September 7, 2018Hello all ???? There seems to be some miscommunication regarding my upcoming movie. I had earlier signed on actress Rachita Ram for an untitled project however I called it off due to some unavoidable circumstances…. https://t.co/Dewyx7BNJr— RJ Mayuraa Raghavendra (@RjMayuraa) September 7, 2018Sign in to your account
Username or Email Address


Password

 Remember Me


