ದಾವಣಗೆರೆ: ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಹರಿಹರ ತಾಲೂಕಿನ ಹರಗನಹಳ್ಳಿಯಲ್ಲಿ ತಡರಾತ್ರಿ ನಡೆದಿದೆ.ಬೆಂಗಳೂರು ಇಂದಿರಾನಗರದ ನಿವಾಸಿಗಳಾದ ಸಿದ್ದಪ್ಪ, ಅಜಯ್, ವಿನಯ್, ಸಿದ್ದಪ್ಪ ಮೃತಪಟ್ಟ ವ್ಯಕ್ತಿಗಳು. ಕಿರಣ್ ಹಾಗೂ ಗಿರೀಶ್‍ಗೆ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಗೋಕಾಕ್ ಜಲಪಾತವನ್ನು ನೋಡಲು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಡಿಟಿಡಿಸಿ ಕೊರಿಯರ್ ಕಂಪೆನಿಯಲ್ಲಿ ನಲ್ಲಿ ಮೃತರು ಕೆಲಸ ಮಾಡುತ್ತಿದ್ದರು. ಹರಿಹರ ಗ್ರಾಮಾಂತರ ಠಾಣಾ ವ್ಯಾಪ್ತಿ ಘಟನೆ ನಡೆದಿದ್ದು, ಅಪಘಾತಕ್ಕೆ ಕಾರು ಚಾಲಕನ ವೇಗವೇ ಕಾರಣ ಎನ್ನುವುದು ತಿಳಿದು ಬಂದಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


