ಬೆಂಗಳೂರು: ಕುಡಿತದ ಜಗಳದಲ್ಲಿ ಅಮ್ಮನಿಗೆ ಥಳಿಸುತ್ತಿದ್ದ ಸಹೋದರನನ್ನೇ ತಮ್ಮ ಕೊಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.ಕೋಣನಕುಂಟೆ ಕ್ರಾಸ್‍ನ ಬೀರೇಶ್ವರ ನಗರದಲ್ಲಿ ಈ ಘಟನೆ ನಡೆದಿದೆ. ವಿನಯ್ ತಮ್ಮ ಸಂಜೀವ್ ನಿಂದ ಕೊಲೆಯಾದ ಸಹೋದರ. ವಿನಯ್ ಪ್ರತಿದಿನ ಕುಡಿದುಕೊಂಡು ಬಂದು ಅಮ್ಮನ ಜೊತೆ ಆಸ್ತಿ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದನು. ಆದ್ದರಿಂದ ಕೋಪಕೊಂಡು ಸಂಜೀವ್ ಕೊಲೆ ಮಾಡಿದ್ದಾನೆ.ವಿನಯ್ ಮತ್ತು ಸಂಜೀವ್ ಸಹೋದರರು. ಕೋಣನಕುಂಟೆ ಕ್ರಾಸ್‍ನ ಬೀರೇಶ್ವರ ನಗರದ ಮನೆಯಲ್ಲಿ ವಾಸವಿದ್ದರು. ತಂದೆ ಅಕಾಲಿಕ ಮರಣ ಹೊಂದಿ ವರ್ಷವಾಗಿರಲಿಲ್ಲ. ಆದರೆ ವಿನಯ್ ಆಸ್ತಿ ವಿಚಾರವಾಗಿ ಅಮ್ಮನ ಬಳಿ ಕ್ಯಾತೆ ತೆಗೆದಿದ್ದಾನೆ. ದಿನ ಕುಡಿದು ಬಂದ ಗಲಾಟೆ ಮಾಡಿ ಥಳಿಸುತ್ತಿದ್ದನು. ಶುಕ್ರವಾರ ರಾತ್ರಿ ಸಹ 10.30ರ ಸುಮಾರಿಗೆ ಕುಡಿದುಕೊಂಡು ಬಂದು ತಾಯಿಯನ್ನು ಥಳಿಸಲು ಶುರು ಮಾಡಿದ್ದನು. ಆಗ ಕೋಪಗೊಂಡ ಸಂಜೀವ್ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ದಕ್ಷಿಣ ವಿಭಾಗ ಡಿಸಿಪಿ ಶರಣಪ್ಪ ಅವರು ಹೇಳಿದ್ದಾರೆ.ಈ ಘಟನೆ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸದ್ಯಕ್ಕೆ ಆರೋಪಿ ಸಂಜೀವ್‍ನನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


