ಬಾಗಲಕೋಟೆ: ಮೊಬೈಲ್ ಒಡೆದ ಅನ್ನೋ ಕಾರಣಕ್ಕೆ ಕುಡಿದ ಮತ್ತಿನಲ್ಲಿ ಸ್ನೇಹಿತರೇ ಸೇರಿಕೊಂಡು ಇನ್ನೊಬ್ಬ ಸ್ನೇಹಿತನೋರ್ವನನ್ನ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಬಂಟನೂರ ಗ್ರಾಮದಲ್ಲಿ ನಡೆದಿದೆ.ವೀರಹಣಮಪ್ಪ ನಾಯಕ್ ರಂಗಣ್ಣನವರ (23) ಕೊಲೆಯಾದ ಯುವಕ. ಗುರುವಾರ ತಡರಾತ್ರಿ ಕೆಲ ಸ್ನೇಹಿತರೆಲ್ಲ ಸೇರಿಕೊಂಡು ಬಂಟನೂರಿನ ನೀಲಗಿರಿ ಗುಡ್ಡದಲ್ಲಿ ಗುಂಡು ಪಾರ್ಟಿ ಮಾಡಿದ್ದಾರೆ. ಈ ವೇಳೆ ತಮ್ಮ ತಮ್ಮಲ್ಲೇ ಜಗಳ ಶುರುವಾಗಿದೆ. ಈ ಮಧ್ಯೆ ವೀರಹಣಮಪ್ಪ ಗೆಳೆಯನೊಬ್ಬನ ಮೊಬೈಲ್ ಒಡೆದು ಹಾಕಿದ್ದಾನೆ. ಇದರಿಂದ ಜಗಳ ಮತ್ತಷ್ಟು ತಾರಕಕ್ಕೇರಿದೆ.ಆಗ ಕೆಲವರು ವೀರಹಣಮಪ್ಪನನ್ನು ವೈರ್ ನಿಂದ ಕತ್ತು ಬಿಗಿದಿದ್ದಾರೆ. ಪರಿಣಾಮ ವೀರಹಣಮಪ್ಪ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಬಳಿಕ ಶವವನ್ನು ಅಲ್ಲೇ ಬಿಟ್ಟು ಮನೆಗೆ ವಾಪಸ್ ಆಗಿದ್ದಾರೆ. ಬೆಳಗ್ಗಿನವರೆಗೂ ವಿಷಯ ಗೊತ್ತಾಗಿರಲಿಲ್ಲ. ಬೆಳಗ್ಗೆಯಾದರೂ ಮಗ ಮನೆಗೆ ಬಾರದಿದ್ದಾಗ ಪೋಷಕರು ಸ್ನೇಹಿತರನ್ನ ವಿಚಾರಿಸಿದ್ದಾರೆ. ಆಗ ಈ ಘಟನೆ ಬೆಳಕಿಗೆ ಬಂದಿದೆ.ಈ ಬಗ್ಗೆ ಮಾಹಿತಿ ತಿಳಿದು ಲೋಕಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಯುವಕನ ಪೋಷಕರ ಹೇಳಿಕೆ ಮೇರೆಗೆ ಮೂವರು ಯುವಕರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಲೋಕಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


