ಗದಗ: ಅಪಘಾತದಿಂದ ಗಾಯಗೊಂಡಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜಮೀನ್ ಅಹಮದ್ ಖಾನ್ ಮಾನವೀಯತೆ ಮೆರೆದಿದ್ದಾರೆ.ಜಿಲ್ಲೆಯ ಹುಲಕೋಟಿ ಬಳಿ ಟಂ ಟಂ ವಾಹನ ಹಾಗೂ ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ಅಪಘಾತದ ರಭಸಕ್ಕೆ ಹುಲಕೋಟಿ ನಿವಾಸಿ ಬಸವರಾಜ್ (32) ಸ್ಥಳದಲ್ಲೇ ಮೃತಪಟ್ಟರೆ, ವಾಹನದಲ್ಲಿದ್ದ ಬಾಬಾಜಾನ್, ದೇವಕ್ಕ, ಮಾಂತೇಶ, ಸುನೀತಾ ಹಾಗೂ ಸೈಯದ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ವಿಕಲಚೇತನ ಯುವಕನ ಸಮಸ್ಯೆ ಕೇಳಿ ಸ್ಥಳದಲ್ಲಿಯೇ 30 ಸಾವಿರ ನೀಡಿದ್ರು ಸಚಿವ ಜಮೀರ್ಇದೇ ಮಾರ್ಗವಾಗಿ ಕುಷ್ಟಗಿಯ ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಚಿವ ಜಮೀರ್ ಅಹಮದ್, ಅಪಘಾತವನ್ನು ಕಂಡು ಕೂಡಲೇ ಗಾಯಾಳುಗಳ ನೆರವಿಗೆ ಬಂದಿದ್ದಾರೆ. ಅಲ್ಲದೇ ಅವರಿಗೆ ಸಮಾಧಾನ ಮಾಡಿ, ಎಲ್ಲರನ್ನು ಅಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಘಟನೆ ಸಂಬಂಧ ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


