ದಾವಣಗೆರೆ: ಪರೀಕ್ಷೆಯಲ್ಲಿ ಪಾಸ್ ಮಾಡುವಂತೆ ಅನುಗ್ರಹಿಸು ಎಂದು ಕಾನೂನು ಪದವಿ ಓದುತ್ತಿರುವ ವಿದ್ಯಾರ್ಥಿ ಬರೆದ ಪತ್ರವೊಂದು ತಾಲೂಕಿನ ಮಾರಿಕೊಪ್ಪದ ಹಳದಮ್ಮ ದೇವಿ ದೇವಸ್ಥಾನದ ಹುಂಡಿಯಲ್ಲಿ ಸಿಕ್ಕಿದೆ.ಹಳದಮ್ಮ ದೇವಿ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಎಣಿಕೆ ಮಾಡುವ ವೇಳೆ ಈ ಪತ್ರ ಸಿಕ್ಕಿದೆ. ಓಂ ಹಳದಮ್ಮ ನಮಃ ಎಂದು ಶ್ಲೋಕದ ಮೂಲಕ ಪತ್ರ ಪ್ರಾರಂಭವಾಗಿದ್ದು, ದೇವರೇ ಎಲ್‍ಎಲ್‍ಬಿ ಎಲ್ಲ ಪರೀಕ್ಷೆಯು ಪಾಸ್ ಆಗಿಲ್ಲ. ನೀನೆ ಪಾಸ್ ಮಾಡಮ್ಮಾ, ಪಾಸ್ ಮಾಡಬೇಕು. ನೀನು ಮಾಡಿದರೆ ಆಗುತ್ತದೆ ಮಾಡುತಾಯಿ. ನನ್ನಾಸೆಯಂತೆ ಕಾರ್ಯ ನಡೆಸಮ್ಮ ಎಂದು ಬರೆದು ಹುಂಡಿಯಲ್ಲಿ ಹಾಕಲಾಗಿದೆ.ಎಣಿಕೆ ವೇಳೆ 9,61,400 ರೂ. ನಗದು, 10 ಲಕ್ಷ ರೂ. ಮೌಲ್ಯದ ಬಂಗಾರ, 10 ಸಾವಿರ ರೂ. ಮೌಲ್ಯದ ಬೆಳ್ಳಿ ಆಭರಣ ಸಿಕ್ಕಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


