ಮಡಿಕೇರಿ: ಬಸ್ ಇಳಿದು ನಿಂತಿದ್ದ ವ್ಯಕ್ತಿ ಮೇಲೆ ಅದೇ ಬಸ್ ಚಕ್ರ ಹರಿದು ಗಂಭೀರ ಗಾಯಗೊಂಡ ಘಟನೆ ವಿರಾಜಪೇಟೆಯ ಕಡಂಗದಲ್ಲಿ ನಡೆದಿದೆ. ಮೈಜುಂ ಎನಿಸೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.39 ವರ್ಷದ ಬಿಶಾಲ್ ಗಂಭೀರ ಗಾಯಗೊಂಡ ವ್ಯಕ್ತಿ. ಬಿಶಾಲ್ ಬಸ್ಸಿನಲ್ಲಿ ಬಂದು ಇಳಿದು ನಿಂತಿದ್ದರು. ಈ ವೇಳೆ ಅದೇ ಬಸ್ ಅವರ ಮೇಲೆ ಹರಿದಿದೆ. ಪರಿಣಾಮ ಬಿಶಾಲ್ 2 ಕಾಲುಗಳ ಮೇಲೆ ಬಸ್ ಚಕ್ರ ಹರಿದಿದ್ದು, ಕಾಲುಗಳು ಮುರಿದಿವೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಬಿಶಾಲ್ ಅವರನ್ನು ಕೂಡಲೇ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಹಿಂದಕ್ಕೆ ನೋಡದೆ ರಿವರ್ಸ್ ತೆಗೆದ ಬಸ್ ಚಾಲಕನ ಬೇಜವಾಬ್ದಾರಿತನವೇ ಘಟನೆಗೆ ಕಾರಣ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


