ಕೋಲಾರ: ಪರಸ್ಪರ ಪ್ರೀತಿಸಿ ಪ್ರೇಮ ವಿವಾಹವಾದ ಯುವಕನ ಮೇಲೆ ಯುವತಿ ಪೋಷಕರು ಹಲ್ಲೆ ಮಾಡಿ ಮನೆ ಧ್ವಂಸಗೊಳಿಸಿದ್ದಾರೆ.ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ವಳಗೇರಹಳ್ಳಿಯಲ್ಲಿ ಘಟನೆ ನಡೆದಿದೆ. ಶಶಿಕುಮಾರ್(25) ಹಾಗೂ ರಮ್ಯಾ(21) ಪ್ರೀತಿಸಿ ಮದುವೆಯಾದ ಜೋಡಿ. ಶಶಿಕುಮಾರ್ ಹಾಗೂ ರಮ್ಯಾ ಬೇರೆ ಬೇರೆ ಜಾತಿಯವರಾಗಿದ್ದು, ಕಳೆದ 3 ದಿನಗಳ ಹಿಂದೆ ಮದುವೆಯಾಗಿದ್ದರು.ಇವರಿಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿದ ಯುವತಿಯ ಪೋಷಕರು ಯುವಕನ ಪೋಷಕರಾದ ಗೋಪಾಲಪ್ಪ ಹಾಗೂ ವೆಂಕಟ ಲಕ್ಷ್ಮಮ್ಮ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ. ಸದ್ಯ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿರುವ ಯುವಕನ ಪೋಷಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಸದ್ಯ ಈ ಘಟನೆ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


