ಬೆಂಗಳೂರು: ನಗರದ ಉಲ್ಲಾಳದ ಅಂಗಡಿ ಬಳಿ ನಿಂತಿದ್ದ ಜನರ ಮೇಲೆ ಗುರುವಾರ ಬೆಳಗ್ಗೆ ಏಕಾಏಕಿ ಹುಚ್ಚಾ ವೆಂಕಟ್ ಹಲ್ಲೆ ನಡೆಸಿದ್ದಾನೆ.ಬುಧವಾರ ರಸ್ತೆಯಲ್ಲಿ ಕುಡಿದು ತೂರಾಡುವ ಮೂಲಕ ಸುದ್ದಿಯಾಗಿದ್ದ ಹುಚ್ಚಾ ವೆಂಕಟ್ ಇಂದು ಅಂಗಡಿ ಬಳಿ ನಿಂತಿದ್ದವರ ಮೇಲೆ ಹಲ್ಲೆ ನಡೆಸಿ ಮತ್ತೊಮ್ಮೆ ತನ್ನ ಹುಚ್ಚಾಟ ಮುಂದುವರಿಸಿದ್ದಾನೆ.ಇಂದು ಬೆಳಗ್ಗೆ 8.30ರ ಸುಮಾರಿಗೆ ಉಲ್ಲಾಳದ ಬೇಕರಿ ಬಳಿ ಬಂದು, ಟೀ ಕೊಡುವ ಯುವಕನ ಮುಖಕ್ಕೆ ಬಿಸಿ ಟೀ ಎರಚಿದ್ದು ಅಲ್ಲದೇ ಆತನನ್ನು ಹಿಂಬಾಲಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ತಡೆಯಲು ಬಂದ ಇಬ್ಬರು ಯುವಕರ ಮೇಲೆಯೂ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಡು ರಸ್ತೆಯಲ್ಲಿ ಕುಡಿದು, ತೂರಾಡಿದ ಹುಚ್ಚಾ ವೆಂಕಟ್!ಕೂಡಲೇ ಸ್ಥಳಕ್ಕೆ ಆಗಮಿಸಿದ ಬ್ಯಾಡರಹಳ್ಳಿ ಪೊಲೀಸರು ಹುಚ್ಚಾ ವೆಂಕಟನನ್ನು ವಶಕ್ಕೆ ಪಡೆದುಕೊಂಡು, ಬಳಿಕ ಜ್ಞಾನ ಭಾರತಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು, ವಿಚಾರಣೆ ನಡೆಸಿದ ಬಳಿಕ ಹುಚ್ಚಾ ವೆಂಕಟ್‍ಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಈ ಹಿಂದೆಯೂ ಸಹ ಸಾರ್ವಜನಿಕರ ಮೇಲೆ ಸುಖಾ ಸುಮ್ಮನೆ ಹಲ್ಲೆ ನಡೆಸಿದ್ದರ ಸಂಬಂಧ ಯಶವಂತಪುರದ ಪೊಲೀಸರು ಸಹ ಎಚ್ಚರಿಕೆಯನ್ನು ನೀಡಿದ್ದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvhttps://www.youtube.com/watch?v=8Ngjmqu7Zw0Sign in to your account
Username or Email Address


Password

 Remember Me


