ಮಂಡ್ಯ: ಇಂದು ಬೆಳಗ್ಗೆ ಪುರಸಭೆ ಸಿಬ್ಬಂದಿಯನ್ನೆ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿದ ಘಟನೆ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ನಡೆದಿದೆ.ಬೆಳಗ್ಗೆ ವಾಟರ್‌ಮ್ಯಾನ್‌ ಎಸ್. ಸುರೇಶ್ ಎಂಬವರು ನೀರು ಬಿಟ್ಟು, ಕೈಕಾಲು ಮುಖ ತೊಳೆಯಲು ಪುರಸಭೆ ಆವರಣಕ್ಕೆ ಬಂದಾಗ ಬೀದಿ ನಾಯಿಗಳು ದಾಳಿ ಮಾಡಿವೆ. ಈ ವೇಳೆ ಸುರೇಶ್ ಪ್ರಾಣ ಉಳಿಸಿಕೊಳ್ಳಲು ಪುರಸಭೆಯ ಡೋರಿನ ಗಾಜು ಒಡೆದು ಕಟ್ಟಡದ ಒಳಗೆ ಹಾರಿದ್ದಾರೆ. ಪರಿಣಾಮ ಕಾಲು, ಸೊಂಟ ಹಾಗೂ ಕೈಗೆ ಗಾಯಗಳಾಗಿವೆ.ಅದೇ ಸ್ಥಳಕ್ಕೆ ಆಗಮಿಸಿದ ಡಿ ಗ್ರೂಪ್ ನೌಕರ ಜಿಪಿ ಬಾಬು, ಸುರೇಶ್ ಸ್ನೇಹಿತ ರಮೇಶ್ ಅವರ ಮೇಲೂ ದಾಳಿ ನಡೆಸಿವೆ. ಪಕ್ಕದ ಅಗ್ನಿ ಶಾಮಕ ಠಾಣೆಯ ಪೊಲೀಸರಾದ ಅಂಜನಿ, ಲೋಕೇಶ್ ನಾಯಕ್ ಅವರ ಮೇಲೂ ದಾಳಿ ಮಾಡಿದ್ದು, ಮುಖ, ಬೆನ್ನಿನ ಮೇಲೆ ಕಚ್ಚಿದೆ. ಕೊನೆಗೆ ಎಲ್ಲರೂ ಸೇರಿ ನಾಯಿಗಳನ್ನು ಹಿಡಿದು ಸಾಯಿಸಿ ದಾಳಿ ಇಂದ ಪಾರಾಗಿದ್ದಾರೆ. ನಾಯಿ ದಾಳಿಗೆ ಒಳಗಾದ ಸಿಬ್ಬಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮೆಡಿಕಲ್ ಆಸ್ಪತ್ರೆಗೆ ರವಾನಿಸಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


