ರಾಮನಗರ: ಕೆಎಸ್ಆರ್‌ಟಿಸಿ ಬಸ್ ಹಾಗೂ ಇಂಡಿಕಾ ಕಾರ್ ನಡುವೆ ಮುಖಾಮುಖಿ ಅಪಘಾತ ನಡೆದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ಮೂರು ಜನರಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಬಳಿ ನಡೆದಿದೆ.ಚಿಕ್ಕಬಳ್ಳಾಪುರ ತಾಲೂಕಿನ ಗಿಡ್ಡನಹಳ್ಳಿ ಗ್ರಾಮದ ಯಲ್ಲಪ್ಪ ಮೃತ ದುರ್ದೈವಿ. ಕೋಡಿಹಳ್ಳಿ ಬಳಿಯ ದೊಡ್ಡಕಬಳ್ಳಿ ಗ್ರಾಮದಲ್ಲಿನ ತಮ್ಮ ಮೊಮ್ಮಗಳನ್ನ ನೋಡಲು ಯಲ್ಲಪ್ಪ ಹಾಗೂ ಆತನ ಕುಟುಂಬದವರು ತೆರಳುತ್ತಿದ್ದರು. ಕೋಡಿಹಳ್ಳಿಯ ಪ್ಲಾಂಟೇಷನ್ ಫಾರಂ ಬಳಿಯ ತಿರುವಿನಲ್ಲಿ ಬಸ್ ಹಾಗೂ ಕಾರ್ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಯಲ್ಲಪ್ಪನ ಜೊತೆ ಕಾರಿನಲ್ಲಿದ್ದ ಭೈರೇಗೌಡ, ಶಿವು, ಹಾಗೂ ಲೋಕೇಶ್ ಎಂಬವರಿಗೆ ತೀವ್ರ ಗಾಯಗಳಾಗಿದ್ದು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.ಘಟನೆ ಸಂಬಂಧ ಕೋಡಿಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬಸ್ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


