ಕಾರವಾರ: ಮದ್ಯ ಸೇವಿಸಿ ತಾಯಿಯೇ ಅಪ್ರಾಪ್ತ ಬಾಲಕಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕಾರವಾರದ ಕಾಜುಭಾಗ್ ಪಿಂಗೆ ರೋಡ್ ನಲ್ಲಿ ನಡೆದಿದೆ.ರೇಣಕಾ ತನ್ನ ಹೆತ್ತ ಮಗಳಿಗೆ ಥಳಿಸಿದ ಮಹಿಳೆ. ರೇಣುಕಾ ಪ್ರತಿದಿನ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದಳು. ಅಲ್ಲದೇ ರೇಣುಕಾ ಕುಡಿತದ ದಾಸಳಾಗಿದ್ದರಿಂದ ಆಕೆಯ ಮೊದಲ ಗಂಡ ಕೂಡ ಈಕೆಯನ್ನು ಬಿಟ್ಟು ಬಿಜಾಪುರಕ್ಕೆ ಹೋಗಿದ್ದ.ಮೊದಲ ಪತಿ ಬಿಟ್ಟು ಹೋದ ನಂತರ ರೇಣುಕಾ ಪ್ಲಂಬರ್ ಕೆಲಸ ಮಾಡುವ ಲಕ್ಷ್ಮಣ್ ಜೊತೆ ಮದುವೆಯಾಗಿದ್ದಳು. ಲಕ್ಷ್ಮಣ್‍ಗೂ ಕೂಡ ಇದು ಎರಡನೇ ಮದುವೆಯಾಗಿದ್ದು, ಆತನ ಮೊದಲನೇ ಪತ್ನಿ ತೀರಿ ಹೋಗಿದ್ದರು. ಸದ್ಯ ರೇಣುಕಾಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಕ್ಕಳಿದ್ದಾರೆ.ರೇಣುಕಾ ತನ್ನ ಮೊದಲನೇ ಪತಿಯ ಮಗಳೊಂದಿಗೆ ತನ್ನ ಎರಡನೇಯ ಪತಿ ಜೊತೆ ವಾಸವಾಗಿದ್ದಳು. ರೇಣುಕಾಗೆ ಕುಡಿತದ ಅಭ್ಯಾಸವಿದ್ದು, ಮೊನ್ನೆ ಕುಡಿತದ ಮತ್ತು ಹೆಚ್ಚಾಗಿದ್ದರಿಂದ ಆಕೆ ತನ್ನ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ.ರೇಣುಕಾ ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸದೇ ಅವರನ್ನು ಮನೆಯಲ್ಲೇ ಕೆಲಸ ಮಾಡಿಸಿಕೊಳ್ಳುತ್ತಿದ್ದಳು. ಮೊನ್ನೆ ಕುಡಿದ ನಶೆ ಹೆಚ್ಚಾಗಿದ್ದರಿಂದ ರೇಣುಕಾ ಪಕ್ಕದ ಮನೆಯ ಮಕ್ಕಳೊಂದಿಗೆ ಆಟವಾಡುತಿದ್ದ ತನ್ನ ಮಗಳ ಮನೆಗೆ ಕರೆತಂದು ತನ್ನ ಸ್ವಂತ ಮಗಳು ಎನ್ನದೇ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾಳೆ.ಮಗಳ ಮೇಲೆ ಹಲ್ಲೆ ನಡೆಸುವುದನ್ನು ನೋಡಿದ ಅಕ್ಕಪಕ್ಕದ ಮನೆಯವರು ಆಕೆಯನ್ನು ತಡೆದು ಮಗುವನ್ನು ರಕ್ಷಿಸಿದ್ದಾರೆ. ಮಗುವಿಗೆ ತೀವ್ರ ಗಾಯವಾಗಿ ತಲೆಯಲ್ಲಿ ರಕ್ತಸ್ರಾವ ಆಗುತ್ತಿತ್ತು. ಈ ವೇಳೆ ಅಕ್ಕಪಕ್ಕದ ಮನೆಯವರು ಅಂಬುಲೆನ್ಸ್ ಗೆ ಕರೆ ಮಾಡಿದ್ದರು. ಆದರೆ ರೇಣುಕಾ ತನ್ನ ಮಗಳನ್ನು ಆಸ್ಪತ್ರೆಗೆ ಕಳುಹಿಸದೇ ಆಕೆಯನ್ನು ರೂಮಿನಲ್ಲಿ ಕೂಡಿಹಾಕಿದ್ದಳು.ರೇಣುಕಾ ತನ್ನ ಪತಿ ಲಕ್ಷ್ಮಣ್ ಮೇಲೂ ಹಲ್ಲೆ ನಡೆಸುತ್ತಿದ್ದರಿಂದ ಆತ ಮನೆಯಲ್ಲಿ ಹೆಚ್ಚು ಕಾಲ ಕಳೆಯುತ್ತಿರಲಿಲ್ಲ. ಅಲ್ಲದೇ ರೇಣುಕಾ ಈಗ ತನ್ನ ಮಗಳ ಮೇಲೆ ಹಲ್ಲೆ ನಡೆಸಿರುವ ವಿಷಯ ಇದುವರೆಗೂ ಆಕೆಯ ಪತಿಗೆ ತಿಳಿದಿಲ್ಲ.ಮಾಧ್ಯಮದಲ್ಲಿ ಈ ವಿಷಯ ಪ್ರಸಾರವಾಗುತ್ತಿದ್ದಂತೆ ಇಂದು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ರೇಣುಕಾಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಆಕೆಯ ಮಕ್ಕಳು ತಾಯಿಯನ್ನು ಬಿಡಲು ಒಪ್ಪುತ್ತಿಲ್ಲ. ಸದ್ಯ ಮಹಿಳಾ ಹಾಗೂ ಮಕ್ಕಳಾ ಕಲ್ಯಾಣ ಇಲಾಖೆ ರೇಣುಕಾ ಅವರಿಗೆ ಕೌನ್ಸಿಲಿಂಗ್ ನಡೆಸಿ ಮಕ್ಕಳನ್ನು ಶಾಲೆಗೆ ಕಳುಹಿಸಲು ನಿರ್ಧರಿಸಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


