ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ನಾಯಕನಾಗಿ ಎಂಟ್ರಿ ಕೊಡುತ್ತಿರೋ ಅಮರ್ ಚಿತ್ರ ಈಗಾಗಲೇ ನಾನಾ ರೀತಿಯಲ್ಲಿ ಸದ್ದು ಮಾಡುತ್ತಿದೆ. ಚಿತ್ರತಂಡದ ಕಡೆಯಿಂದ ದಿನಕ್ಕೊಂದರಂತೆ ಸೆನ್ಸೇಷನಲ್ ಸುದ್ದಿಗಳೂ ಹೊರ ಬೀಳುತ್ತಿವೆ. ಈಗ ಹೊರ ಬಿದ್ದಿರೋ ಸುದ್ದಿ ಅಭಿಮಾನಿಗಳನ್ನೆಲ್ಲ ಹುಚ್ಚೆಬ್ಬಿಸುವಂಥಾದ್ದು!ಅಮರ್ ಚಿತ್ರದ ಅತಿಥಿ ಪಾತ್ರವೊಂದರಲ್ಲಿ ನಿರೂಪ್ ಭಂಡಾರಿ ನಟಿಸುತ್ತಿರೋ ಸುದ್ದಿ ಹೊರಬಿದ್ದ ಬೆನ್ನಲ್ಲೇ ರಚಿತಾ ರಾಮ್ ವಿಶೇಷವಾದ ಹಾಡೊಂದರಲ್ಲಿ ಅಮರ್ ಜೊತೆ ಹೆಜ್ಜೆ ಹಾಕಲಿರೋ ವಿಚಾರವನ್ನೂ ಕೂಡಾ ನಾಗಶೇಖರ್ ಜಾಹೀರು ಮಾಡಿದ್ದಾರೆ.ಇದು ಹೇಳಿಕೇಳಿ ಅಂಬರೀಶ್ ಪುತ್ರ ಅಭಿಷೇಕ್ ಹೀರೋ ಆಗಿ ಲಾಂಚ್ ಆಗುತ್ತಿರುವ ಚಿತ್ರ. ಸಾಕಷ್ಟು ಅಳೆದೂ ತೂಗಿಯೇ ನಾಗಶೇಖರ್ ಅವರಿಗೆ ಅಂಬರೀಶ್ ಜವಾಬ್ದಾರಿ ವಹಿಸಿದ್ದಾರೆ. ಇದನ್ನು ಅಚ್ಚುಕಟ್ಟಾಗಿಯೇ ನಿಭಾಯಿಸುತ್ತಿರುವ ನಾಗಶೇಖರ್ ವಿಶೇಷತೆಗಳ ಸರಮಾಲೆಯನ್ನೇ ಪೋಣಿಸುತ್ತಿದ್ದಾರೆ. ರಚಿತಾ ರಾಮ್ ಎಂಟ್ರಿ ಕೂಡಾ ಅದರ ಒಂದು ಭಾಗ. ರಚಿತಾ ರಾಮ್ ಅವರ ಭಾಗದ ವಿಶೇಷವಾದ ಹಾಡಿನ ಚಿತ್ರೀಕರಣ ಈಗಾಗಲೇ ಶುರುವಾಗಿದೆ.ಅಮರ್ ಚಿತ್ರ ಚೆಂದದ ಪ್ರೇಮ ಕಥಾನಕ ಹೊಂದಿದೆ. ಬೈಕ್ ರೇಸ್ ಪ್ರಧಾನವಾಗಿರೋ ಈ ಚಿತ್ರ ಪಕ್ಕಾ ಆಕ್ಷನ್ ಜಾನರಿನದ್ದೂ ಹೌದು. ಚಿತ್ರೀಕರಣದ ಹಂತದಲ್ಲಿಯೇ ನಾನಾ ಥರದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿರೋ ಈ ಚಿತ್ರ ವ್ಯಾಪಕ ನಿರೀಕ್ಷೆಗಳನ್ನೂ ಹುಟ್ಟು ಹಾಕಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


