ಹಾವೇರಿ: ವಿಕಲಚೇತನರೊಬ್ಬರ ಸಮಸ್ಯೆಯನ್ನು ಆಲಿಸಿ ಸ್ಥಳದಲ್ಲಿಯೇ 30 ಸಾವಿರ ರೂ. ಹಣವನ್ನು ನೀಡುವ ಮೂಲಕ ಸಚಿವ ಜಮೀರ್ ಅಹ್ಮದ್ ಖಾನ್ ಮಾನವೀಯತೆ ಮೆರೆದಿದ್ದಾರೆ.ಮದರಸಾಬ್ ತಿಳುವಳ್ಳಿ ಅವರಿಗೆ ಸಚಿವ ಜಮೀರ್ ಸಹಾಯ ಮಾಡಿದ್ದಾರೆ. ಇಂದು ಹಾವೇರಿಯ ಗುರುಭವನದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಒಂದು ಮನವಿ ನೀಡಲು ಯುವಕ ಆಗಮಿಸಿದ್ದರು. ಈ ವೇಳೆ ತಿಳುವಳ್ಳಿಯ ಸಮಸ್ಯೆಯನ್ನು ಕೇಳಿ ಸ್ಥಳದಲ್ಲಿಯೇ 30 ಸಾವಿರ ರೂಪಾಯಿ ಹಣವನ್ನು ಜಮೀರ್ ನೀಡಿದ್ದಾರೆ.ಶಿಕ್ಷಕಕ ದಿನಾಚರಣೆ ಕಾರ್ಯಕ್ರಮಕ್ಕೆ ಗುರುಭವನಕ್ಕೆ ಜಮೀರ್ ಆಗಮಿಸಿದ್ದರು. ತಿಳುವಳ್ಳಿ ಯುವಕ ಕಳೆದ ಹತ್ತು ವರ್ಷಗಳಿಂದ ತ್ರಿಚಕ್ರ ವಾಹನಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡ್ತಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇಂದು ಜಮೀರ್ ಬಂದ ತಕ್ಷಣ ಅವರ ಬಳಿ ಮದರಸಬ್ ತಿಳುವಳ್ಳಿ ಸಮಸ್ಯೆಯನ್ನ ಹೇಳಿಕೊಂಡಿದ್ದಾರೆ. ಬಳಿಕ ಜಮೀರ್ ತಮ್ಮ ಜೇಬಿನಿಂದ ಹಣ ತೆಗೆದುಕೊಟ್ಟು ಮಾನವೀಯತೆ ಮೆರೆದಿದ್ದಾರೆ.ತಿಳುವಳ್ಳಿ ವಾಹನ ಸಂಪೂರ್ಣ ಹಾಳಾಗಿದ್ದರಿಂದ ಪರದಾಡುತ್ತಿದ್ದನು. ಸ್ಥಳದಲ್ಲಿಯೇ ಪರಿಹಾರ ಸಿಕಿದ್ದು, ಮದರಸಬ್ ತಿಳುವಳ್ಳಿ ಸಂತೋಷವಾಗಿದೆ ಎಂದು ತಿಳುವಳ್ಳಿ ಸ್ನೇಹಿತರು ಹೇಳಿದ್ದು, ಸಚಿವ ಜಮೀರ್ ಅಹ್ಮದ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


