ಕೋಲಾರ: ವಿದ್ಯುತ್ ತಗುಲಿ ಮೂರು ವರ್ಷದ ಆನೆಮರಿ ಸಾವನ್ನಪ್ಪಿರುವ ಘಟನೆ ಕೋಲಾರದ ಗಡಿ ಆಂದ್ರ ಪ್ರದೇಶದಲ್ಲಿ ನಡೆದಿದೆ.ಕೋಲಾರ ಜಿಲ್ಲೆಯ ಗಡಿ ಆಂದ್ರದ ಚಿತ್ತೂರು ಜಿಲ್ಲೆಯ ಪಲಮನೇರು ಸಮೀಪದ ಬೆರುಪಲ್ಲಿ ಗ್ರಾಮದ ಬಳಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಕಳೆದ ರಾತ್ರಿ ಗ್ರಾಮದ ಬಳಿ ಬೆಳೆ ನಾಶ ಮಾಡಿರುವ 7 ಆನೆಗಳ ಹಿಂಡು, ಸುತ್ತಮುತ್ತಲಿನ ಗ್ರಾಮದ ಬಳಿ ಬೀಡು ಬಿಟ್ಟಿವೆ.ರಾತ್ರಿ ತೋಟದ ಪಕ್ಕದಲ್ಲಿ ಇದ್ದ ವಿದ್ಯುತ್ ತಂತಿಯನ್ನು ಆನೆ ಮರಿ ಸೊಂಡಲಿನಿಂದ ತಾಕಿದ ಪರಿಣಾಮ 3 ವರ್ಷದ ಗಂಡು ಆನೆಮರಿ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಸಾವಿಗೆ ನಿಖರ ಕಾರಣದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಆನೆ ಹಿಂಡು ಬೀಡುಬಿಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಕಾಡಿನಿಂದ ಬಾರದಂತೆ ಹೀಗಾಗಲೆ ಟ್ರಂಚ್ ಮಾಡಿದ್ದರು ಸಹ ನಾಡಿನತ್ತ ಬಂದು ಬೆಳೆ ನಾಶ ಮಾಡುತ್ತಿವೆ ಎಂಬುದು ಸ್ಥಳೀಯರ ಆಕ್ರೋಶವಾಗಿದೆ. ಸದ್ಯ ಆನೆ ಹಾವಳಿಯನ್ನು ಆದಷ್ಟು ಬೇಗ ತಡೆಯಲಾಗುವುದು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


