ಚಿಕ್ಕಮಗಳೂರು: ಅಸ್ಸಾಂ ಮೂಲದ ಕಳ್ಳರ ಗ್ಯಾಂಗ್‍ವೊಂದು ಮನೆಯ ಹೆಂಚು ತೆಗೆದು ಕಳ್ಳತನಕ್ಕೆ ಯತ್ನಿಸುವಾಗ ಸೆರೆಯಾದ ಘಟನೆ ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ನಡೆದಿದೆ.ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಹೊಸಪೇಟೆ ಗ್ರಾಮದ ಜಾನ್ ಎಂಬವರ ಮನೆಯ ಹೆಂಚು ತೆಗೆದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಮನೆಯ ಒಳಗೆ ಶಬ್ಧ ಕೇಳಿ ಪರಿಶೀಲಿಸಿದಾಗ ಮಹಿಳೆಯೊಬ್ಬಳು ಸಿಕ್ಕಿಕೊಂಡಿದ್ದು, ಸ್ಥಳೀಯರು ಆಕೆಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆದರೆ ಮಾಹಿತಿ ತಿಳಿಯುತ್ತಿದ್ದಂತೆ ಆಕೆಯೊಂದಿಗೆ ಇದ್ದ ಇಬ್ಬರು ಪುರುಷರು ಎಸ್ಕೇಪ್ ಆಗಿದ್ದಾರೆ.ವಶಕ್ಕೆ ಪಡೆದ ಮಹಿಳೆ ಬಳಿ ಐದಾರು ಸಿಮ್ ಕಾರ್ಡ್, ಕ್ರೆಡಿಟ್ ಕಾರ್ಡ್, ಕತ್ತರಿ, ಪರ್ಸ್ ಪತ್ತೆಯಾಗಿದ್ದು, ಜೊತೆಗೆ ಮುಂಬೈ, ರಾಜಸ್ಥಾನ್, ಅಸ್ಸಾಂ, ರಾಜ್ಯದ ಬಿಲ್ ಗಳು ಪತ್ತೆಯಾಗಿವೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


