ಬೆಂಗಳೂರು: ಗಾಂಜಾ ಹಾಡಿನಿಂದ ಮಾದಕ ವಸ್ತುಗಳ ಸೇವನೆ ಪ್ರಚೋದನೆ ನೀಡಿದ ಆರೋಪದಡಿ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿಯನ್ನ ಸಿಸಿಬಿ ವಿಚಾರಣೆ ನಡೆಸಿತ್ತು. ಈಗ ಈ ಪ್ರಕರಣದಲ್ಲಿ ಚಂದನ್ ಶೆಟ್ಟಿ ಬಿಗ್ ರಿಲೀಫ್ ಸಿಕ್ಕಿದೆ.ಮಹಿಳೆ ಮತ್ತು ಮಾದಕ ದ್ರವ್ಯದಳ ತನಿಖಾಧಿಕಾರಿ ಬಿ.ಎಸ್ ಮೋಹನ್ ಕುಮಾರ್ ಅವರು ಚಂದನ್ ಗೆ ಹಿಂಬರಹ ಪತ್ರವನ್ನು ಬರೆದಿದ್ದಾರೆ. ಪತ್ರದ ಮೂಲಕ ತಮ್ಮ ವಿಚಾರಣೆ ಮುಗಿದಿದ್ದು, ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆಗೆ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ಗಾಂಜಾ ಹಾಡಿನ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದ ಚಂದನ್ ಶೆಟ್ಟಿಗೆ ರಿಲೀಫ್ ಸಿಕ್ಕಿದಂತಾಗಿದೆ.ಪತ್ರದಲ್ಲಿ ಏನಿದೆ?
“ಈ ಮೂಲಕ ನಿಮಗೆ ತಿಳಿಯಪಡಿಸುವುದೇನೆಂದರೆ, ತಾವು ಅಂತ್ಯ ಎಂಬ ಹೆಸರಿನ ಚಲನಚಿತ್ರದಲ್ಲಿ ಮಾದಕ ವಸ್ತು ಸಂಬಂಧಪಟ್ಟ ಹಾಡನ್ನು ಹಾಡಿದ್ದು, ಈ ಹಾಡಿನಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂಬ ಉದ್ದೇಶದಿಂದ ನಿಮ್ಮನ್ನು ವಿಚಾರಣೆ ಮಾಡಿ, ನಿಮ್ಮ ಹೇಳಿಕೆಯನ್ನು ಪಡೆದು ನಮ್ಮ ವಿಚಾರಣೆಯನ್ನು ಮುಕ್ತಾಯ ಮಾಡಲಾಗಿರುತ್ತದೆ. ಇನ್ನು ಮುಂದೆ ಈ ಸಂಬಂಧ ತಮ್ಮ ವಿಚಾರಣೆಯ ಅವಶ್ಯಕತೆ ಇರುವುದಿಲ್ಲ” ಎಂದು ಬಿ.ಎಸ್. ಮೋಹಲ್ ಕುಮಾರ್ ತಿಳಿಸಿದ್ದಾರೆ.ಏನಿದು ಪ್ರಕರಣ?
ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯ ಅಂತ್ಯ ಸಿನಿಮಾದ ಗಾಂಜಾ ಕಿಕ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿತ್ತು. ಆದರೆ ಗಾಂಜಾ ಕಿಕ್ ಹಾಡಿನಲ್ಲಿ ಮಾದಕ ವಸ್ತುಗಳನ್ನು ಸೇವಿಸುವ ಕುರಿತು ವೈಭವಿಕರಿಸಿ ತೋರಿಸಲಾಗಿದೆ. ಹೀಗಾಗಿ ಖುದ್ದು ಸ್ವಯಂ ದೂರು ದಾಖಲಿಸಿಕೊಂಡಿದ್ದ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಚಂದನ್ ಶೆಟ್ಟಿಗೆ ಸಮನ್ಸ್ ಜಾರಿ ಮಾಡಿದ್ದರು.ಚಂದನ್ ಸ್ಪಷ್ಟನೆ
ನನ್ನದು ಯಾವುದೇ ತಪ್ಪಿಲ್ಲ. ಅಂತ್ಯ ಚಿತ್ರಕ್ಕಾಗಿ ಮುತ್ತು ಎಂಬವರು ಸಾಹಿತ್ಯ ಬರೆದಿದ್ದು, ಕೇವಲ 5 ಸಾವಿರ ರೂ. ಸಂಭಾವನೆಗಾಗಿ ನಾನು ನನ್ನ ಜವಾಬ್ದಾರಿ ಮರೆತು ಸಂಗೀತ ಸಂಯೋಜನೆ ಮಾಡಿ ಹಾಡಿರುವುದಾಗಿ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿರುವೆ ಎಂದು ತಿಳಿಸಿದ್ದರು.ಅದು ನನ್ನ ಪ್ರಾರಂಭದ ಹಂತವಾಗಿತ್ತು. ಕಡಿಮೆ ಸಂಭಾವನೆ ನೀಡಿದರೂ ಹಾಡಬೇಕಾದ ಪರಿಸ್ಥಿತಿ ಇತ್ತು. ಅಂತ್ಯ ಸಿನಿಮಾ ಡ್ರಗ್ಸ್ ವಿಷಯಾಧಾರಿತ ಸಿನಿಮಾ ಆಗಿದ್ದು, ಚಿತ್ರದ ಮೊದಲ ಭಾಗದಲ್ಲಿ ಡ್ರಗ್ಸ್ ಸೇವನೆ, ಅದರಿಂದ ಸಿಗುವ ಮಜಾದ ಬಗ್ಗೆ ಇದೆ. ಆದರೆ ಎರಡನೇ ಭಾಗದಲ್ಲಿ ಡ್ರಗ್ಸ್‍ನಿಂದಾಗುವ ದುಷ್ಪರಿಣಾಮದ ಕಥೆಯಿದೆ. ಸಮಾಜದಲ್ಲಿ ಜಾಗೃತಿ ಮೂಡಿಸುವ ಸಿನಿಮಾ ಆಗಿದ್ದರಿಂದ ನಾನು ಹಾಡಲು ಒಪ್ಪಿಕೊಂಡಿದ್ದೆ. ನಿರ್ಮಾಪಕರಿಗೆ ಹಣಕಾಸಿನ ಸಮಸ್ಯೆಯಾಗಿ ಸಿನಿಮಾ ಬಿಡುಗಡೆ ಆಗಲಿಲ್ಲ. ಹೀಗಾಗಿ ಹಾಡಿನ ಉದ್ದೇಶ ಏನು ಅಂತಾ ಅರ್ಥವಾಗಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.ಯುವಕರು ಯಾವುದೇ ಕಾರಣಕ್ಕೂ ಮಾದಕ ವಸ್ತುಗಳ ಹಿಂದೆ ಹೋಗಬೇಡಿ. ಈ ಪ್ರಕರಣವನ್ನು ಉದಾಹರಣೆಯಾಗಿ ಇಟ್ಟುಕೊಂಡು ಮುಂದೆ ಯಾರೊಬ್ಬರು ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡುವ ಹಾಡುಗಳ ನಿರ್ಮಾಣ ಮಾಡಬಾರದು. ಜೊತೆಗೆ ಸಾಮಾಜಿಕ ಜಾಲತಾಣಕ್ಕೆ ಯಾರು ಅಂತ್ಯ ಸಿನಿಮಾ ಚಿತ್ರದ ಹಾಡನ್ನು ಹಾಕಿರುವಿರಿ ಅದನ್ನು ಡಿಲೀಟ್ ಮಾಡಿ ಎಂದು ಚಂದನ್ ಶೆಟ್ಟಿ ಮನವಿ ಮಾಡಿಕೊಂಡಿದ್ದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvhttps://www.youtube.com/watch?v=MghU7ApDTBYSign in to your account
Username or Email Address


Password

 Remember Me


