ಬೆಂಗಳೂರು: ಶಾಸ್ತ್ರ ಹೇಳುವ ನೆಪದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ಕದ್ದೊಯ್ದ ಪ್ರಕರಣ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಕೆರೆಕತ್ತಿಗನೂರು ಪಾಳ್ಯ ಬಳಿ ನಡೆದಿದೆ.ಗ್ರಾಮದ ನಿವಾಸಿ ಮಂಜುನಾಥ್ ಎಂಬವರ ಫ್ಯಾಷನ್ ಪ್ರೋಬೈಕ್ ಅನ್ನು ಖದೀಮರು ಎಸ್ಕೇಪ್ ಮಾಡಿದ್ದಾರೆ. ಇಬ್ಬರು ಸೋಮವಾರ ಸಂಜೆ ವೇಳೆಗೆ ಮಂಜುನಾಥ್ ರ ಅಂಗಡಿಯ ಬಳಿ ಬಜಾಜ್ ಗಾಡಿಯಲ್ಲಿ ಬಂದು ಕುಳಿತಿದ್ದಾರೆ. ಮತ್ತೊಬ್ಬ ಮನೆಯ ವಾಸ್ತು ನೋಡುತ್ತೇನೆ ಎಂದು ಗಮನ ಸೆಳೆದಾಗ ಅಂಗಡಿಯ ಮುಂದೆ ಕುಳಿತಿದ್ದ ವ್ಯಕ್ತಿ ಬೈಕ್ ಅನ್ನು ಎಸ್ಕೇಪ್ ಮಾಡಿದ್ದಾನೆ. ಶಾಸ್ತ್ರ ಹೇಳುವ ಮನು ಎಂಬ ಹೆಸರಿನ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಪ್ರಕರಣ ಸಂಬಂಧ ಮಂಜುನಾಥ್ ವಿರುದ್ಧ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictSign in to your account
Username or Email Address


Password

 Remember Me


