ಚಿಕ್ಕೋಡಿ: ಅಂಗಡಿ ಮಾಲಕಿ ಹುಕ್ಕೇರಿ ಪುರಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಕಡ್ಲೆಪುರಿ ಹಾರಿಸಿ ಸಂಭ್ರಮಿಸಿದ್ದಾರೆ.ಹುಕ್ಕೇರಿ ಪುರಸಭೆಯ 14 ನೇ ಮಹಿಳಾ ವಾರ್ಡ್ ನಿಂದ ಸುರೇಖಾ ಗಳತಿಗಮಠ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಅದರಲ್ಲಿ ಕಾಂಗ್ರೆಸ್ಸಿನ ಸುರೇಖಾ ಅವರು ಜಯಗಳಿಸಿದ್ದರು.ಸುರೇಖಾ ಅವರು ಗೆಲುವು ತಮ್ಮದಾಗಿಸಿಕೊಳ್ಳುತ್ತಿದ್ದಂತೆಯೇ ಅವರ ಕುಟುಂಬಸ್ಥರು ಸಂಭ್ರಮ ಮುಗಿಲುಮುಟ್ಟಿತ್ತು. ಅಲ್ಲದೇ ನಡುರಸ್ತೆಯಲ್ಲಿಯೇ ಸುರೇಖಾ ಅವರ ಅಂಗಡಿಯಿಂದಲೇ ಕಡ್ಲೆಪುರಿ ತಂದು ಹಾರಿಸಿ ಖುಷಿ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರು ಕೂಡ ಹುಕ್ಕೇರಿ ಪಟ್ಟಣದ ಕೋರ್ಟ್ ವೃತ್ತದಲ್ಲಿ ಕಡಲೆ ಪುರಿ ಎರಚಿ ಸಂಭ್ರಮಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


