ಬೆಂಗಳೂರು: ವೀಕೆಂಡ್ ನಲ್ಲಿ ಮೋಜು ಮಸ್ತಿ ಮಾಡಲು ಬೆಂಗಳೂರು ನಗರದಿಂದ ಬರುವ ಯುವಕರ ಜಾಲಿ ರೈಡ್ ಬೈಕ್ ಕ್ರೇಜ್ ನಿಂದ ಪಾದಚಾರಿ ಜೀವಕ್ಕೆ ಕುತ್ತು ತಂದ ಘಟನೆ ನಡೆದಿದೆ.ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ರಾಷ್ಟ್ರೀಯ ಹೆದ್ದಾರಿ ನೆಲಮಂಗಲ-ಮಂಗಳೂರು 48ರ ಕುಡ್ಲೂರು ಬಳಿ ಈ ಘಟನೆ ನಡೆದಿದೆ. ಪಾದಚಾರಿ ಸಿದ್ದಪ್ಪಗೆ ಕೆ.ಟಿ.ಎಂ ಐಶರಾಮಿ ಹಾಗೂ ಹೈ ಸ್ಪೀಡ್ ಬೈಕ್ ಡಿಕ್ಕಿ ಹೊಡೆದಿದೆ.ಸದ್ಯ ಸಿದ್ದಪ್ಪ ಚಿಂತಾಜನಕ ಸ್ಥಿತಿಯಲ್ಲಿದ್ದು, ಸ್ಥಳಿಯ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಬೆಂಗಳೂರು ನಗರದಿಂದ ಸುಮಾರು 30 ಯುವಕರ ತಂಡ ಐಶಾರಾಮಿ ಬೈಕ್ ಗಳಲ್ಲಿ ಕುಣಿಗಲ್ ಮಾರ್ಗವಾಗಿ ಮೋಜು ಮಸ್ತಿನಲ್ಲಿ ಸುತ್ತಾಡುತ್ತಾರೆ ಈ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.ಸದ್ಯ ಈ ಬಗ್ಗೆ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


