ರಾಮನಗರ: ಗೃಹಿಣಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕನಕಪುರದ ಎಂಜಿ ರಸ್ತೆಯಲ್ಲಿ ನಡೆದಿದೆ.ಪೂಜಾ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಗೃಹಿಣಿ. ಮೂರು ವರ್ಷಗಳ ಹಿಂದೆ ಕನಕಪುರದ ಎಂಜಿ ರಸ್ತೆಯ ನಿವಾಸಿ ಚೇತನ್ ಎಂಬವರ ಜೊತೆ ಪೂಜಾರ ಮದುವೆ ಆಗಿತ್ತು. ಆದರೆ ಇತ್ತೀಚೆಗೆ ಮನೆಯಲ್ಲಿ ಸಣ್ಣಪುಟ್ಟ ವಿಚಾರಕ್ಕೂ ಗಲಾಟೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಪೂಜಾ, ಪತಿ ಮನೆಯವರ ಕಿರುಕುಳದ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದ್ದರು.ರಾತ್ರಿ ವೇಳೆ ಮತ್ತೆ ಪೂಜಾ ಮತ್ತು ಪತಿಯ ನಡುವೆ ಜಗಳ ನಡೆದಿದೆ. ಬೆಳಗ್ಗೆ ಪೂಜಾ ಸಾವನ್ನಪ್ಪಿರುವುದಾಗಿ ಚೇತನ್ ತನ್ನ ಅತ್ತೆ ಮನೆಯವರಿಗೆ ತಿಳಿಸಿ ನಾಪತ್ತೆಯಾಗಿದ್ದಾನೆ. ಘಟನೆ ಸಂಬಂಧ ಸ್ಥಳಕ್ಕೆ ಬಂದ ಮೃತ ಪೂಜಾಳ ಪೋಷಕರು ಪೂಜಾಳ ಪತಿ ಚೇತನ್ ಹಾಗೂ ಆತನ ಪೋಷಕರ ವಿರುದ್ಧ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


