ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣ ಹಾಗೂ ತೆಲುಗಿ ವಿಜಯ್ ದೇವರಕೊಂಡ ಅಭಿನಯದ `ಗೀತಾ ಗೋವಿಂದ’ ಸಿನಿಮಾ ಬಿಡುಗಡೆಗೊಂಡಿದ್ದು, ಕರ್ನಾಟಕ ಸೇರಿದಂತೆ ಎಲ್ಲ ಕಡೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.ಈ ಸಿನಿಮಾ ಬಿಡುಗಡೆಯಾಗುವ ಮೊದಲೆ ಟ್ರೇಲರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡಿತ್ತು. ಅಷ್ಟೆ ಅಲ್ಲದೇ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ನಡುವಿನ ಕೆಮಿಷ್ಟ್ರಿಯ ಬಗ್ಗೆ ಭಾರೀ ಚರ್ಚೆಯಾಗಿತ್ತು. ಸದ್ಯಕ್ಕೆ ಈ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸುಮಾರು 12 ದಿನಗಳಲ್ಲಿ 100 ಕೋಟಿ ಗಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.ಈ ಯಶಸ್ಸಿನ ಖುಷಿಯಲ್ಲಿರುವ ಅಜಯ್ ದೇವರಕೊಂಡ ಅವರು ತಮ್ಮ ಈ ಸಂತಸದ ಸುದ್ದಿಯನ್ನ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಈ ಯಶಸ್ಸನ್ನ ಸಿನಿಮಾದಲ್ಲಿ ತಮಗೆ ಸಾಥ್ ನೀಡಿದ್ದ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಅರ್ಪಿಸಿದ್ದಾರೆ.“ನನ್ನ ಮೊದಲ 100 ಕೋಟಿಯನ್ನ ನನ್ನ ಕೋಚಿಂಗ್ ಸಿಬ್ಬಂದಿ, ಗೀತಾ ಆರ್ಟ್ಸ್, ನನ್ನ ಕ್ಯಾಪ್ಟನ್ ಬುಜ್ಜಿ, ನನ್ನ ಲವ್ಲಿ ಪಾಟ್ನರ್ ರಶ್ಮಿಕಾ ಮಂದಣ್ಣ ಅವರಿಗೆ ಅರ್ಪಿಸಲು ಇಷ್ಟಪಡುತ್ತೇನೆ. ಜೊತೆಗೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಕನ್ನಡ ಜನತೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದು ವಿಜಯ್ ದೇವರಕೊಂಡ ಅವರು ಟ್ವೀಟ್ ಮಾಡಿದ್ದಾರೆ.The boys played well.I would like to dedicate my first century to my coaching staff – Geetha Arts, my captain Bujji and @iamRashmika for the lovely partnership. And the amazing crowd :)) The Telugu crowd, The Tamil crowd, The Kannada crowd and The Malayali crowd. Amazing! pic.twitter.com/6cZGEJUQdJ— Vijay Deverakonda (@TheDeverakonda) August 31, 2018ನಟಿ ರಶ್ಮಿಕಾ ಮಂದಣ್ಣ ಈಗಾಗಲೇ ತೆಲುಗಿನಲ್ಲಿ ಒಂದು ಸಿನಿಮಾ ಮಾಡಿದ್ದು, ಇದು ಅವರ ಎರಡನೇ ಸಿನಿಮಾವಾಗಿದೆ. ಈ ಹಿಂದೆ `ಚಲೋ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈಗ ಮತ್ತೊಂದು ತೆಲುಗು ಸಿನಿಮಾ ಮಾಡುತ್ತಿದ್ದು, ಈ ಸಿನಿಮಾದಲ್ಲೂ ಕೂಡ ವಿಜಯ ದೇವರಕೊಂಡ ನಾಯಯಕರಾಗಿದ್ದಾರೆ. ಸದ್ಯಕ್ಕೆ ಕನ್ನಡದಲ್ಲಿ ನಟ ದರ್ಶನ್ ಅಭಿನಯದ `ಯಜಮಾನ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


