ಬೆಂಗಳೂರು: ರಾಜ್ಯದ 2016 ಮತ್ತು 17ನೇ ಸಾಲಿನ ಇ- ಆಡಳಿತ ಪ್ರಶಸ್ತಿ ಈ ಬಾರಿ ಬೆಂಗಳೂರು ನಗರ ಪೊಲೀಸರಿಗೆ ಲಭಿಸಿದೆ. ರಾಜ್ಯ ಸರ್ಕಾರ ಈ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ನಗರ ಪೊಲೀಸರ ಘಟಕದ ಎರಡು ವಿಭಾಗಳಿಗೆ ಬೆಸ್ಟ್ ಇ-ಆಡಳಿತ ಪ್ರಶಸ್ತಿ ಸಿಕ್ಕಿದೆ.ಕಳೆದ ವರ್ಷ ಸ್ಥಾಪನೆಯಾದ ಸಾಮಾಜಿಕ ಜಾಲತಾಣದ ಕಮಾಂಡ್ ಸೆಂಟರ್ ನ ನಮ್ಮ 100 ಜಿಐಎಸ್ ತಂತ್ರಜ್ಞಾನ ಮತ್ತು ಮೊಬೈಲ್ ತಂತ್ರಜ್ಞಾನದ ಇ ಲಾಸ್ಟ್ ಮತ್ತು ಫೌಂಡ್ ಆ್ಯಪ್‍ಗೆ ಪ್ರಶಸ್ತಿ ಲಭಿಸಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಪ್ರಶಸ್ತಿ ಘೋಷಣೆ ಮಾಡಿದ್ದು. ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಪ್ರಶಸ್ತಿ ಪತ್ರದ ಜೊತೆಗೆ ಹತ್ತು ಲಕ್ಷ ಬಹುಮಾನ ಸ್ವೀಕರಿಸಿದ್ರು.ಈ ಆ್ಯಪ್‍ಗಳ ಮುಖ್ಯ ಉದ್ದೇಶ ಸಾರ್ವಜನಿಕ ಸೇವೆಗಳನ್ನು ಮಿತವ್ಯಯದೊಂದಿಗೆ ತ್ವರಿತವಾಗಿ ಬಳಕೆದಾರರಿಗೆ ನೀಡುವುದರೊಂದಿಗೆ ಇ ಆಡಳಿತ ಕ್ಷೇತ್ರದಲ್ಲಿ ಸುಸ್ಥಿರ ಮತ್ತು ತಾಂತ್ರಿಕ ಉಪಕ್ರಮಿಕೆಗಳನ್ನು ವಿನ್ಯಾಸ ಮತ್ತು ಅನುಷ್ಠಾನ ಹೊಚ್ಚ ಹೊಸ ಅವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವುದಾಗಿದೆ.ಈ ಎರಡು ವಿಭಾಗ ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅಭಿನಂದನೆ ಸಲ್ಲಿಸಿದ್ದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


