ಚಿಕ್ಕಮಗಳೂರು: ಬಸ್ಸೊಂದು ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಕೂಡಲೇ ವಿದ್ಯುತ್ ಕಂಬದ ಫ್ಯೂಸ್ ಹಾರಿ ಹೋಗಿದ್ದರಿಂದ ಭಾರೀ ಅನಾಹುತದಿಂದ ಜನ ಪಾರಾದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಇಂದು ಬೆಳಗ್ಗೆ ಕೆ.ಕೆ.ಬಿ ಕಂಪನಿಗೆ ಸೇರಿದ ಬಸ್ ಮೂಡಿಗೆರೆ-ಬಾಳೆಹೊನ್ನೂರು ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ಬಸ್ಸಿಗೆ ದನಕರುಗಳು ಅಡ್ಡ ಬಂದಿವೆ. ಈ ವೇಳೆ ಬಸ್ ಚಾಲಕ ಗೋವುಗಳನ್ನ ರಕ್ಷಿಸಲು ಮುಂದಾಗಿದ್ದು, ಆಗ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿಯ ಚರಂಡಿಗೆ ಇಳಿದಿದೆ.ಈ ವೇಳೆ ಬಸ್ ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಅದೇ ವಿದ್ಯುತ್ ಕಂಬ ಮುರಿದು ಬಸ್ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಡಿಕ್ಕಿಯಾದ ಕೂಡಲೇ ಲೈಟ್ ಕಂಬದ ಫ್ಯೂಸ್ ಹಾರಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಈ ಬಸ್ಸಿನಲ್ಲಿ 15 ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


