ಬೆಂಗಳೂರು: ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜ ಅವರ ಹುಟ್ಟುಹಬ್ಬದ ಪ್ರಯುಕ್ತ ಪ್ರಿಯಾ ಸುದೀಪ್ ಅವರು ತಮ್ಮ ಅತ್ತೆಗೆ ಶುಭಾಶಯವನ್ನು ಕೋರಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾ ಸುದೀಪ್, “ಹುಟ್ಟುಹಬ್ಬದ ಶುಭಾಶಯ ಅಮ್ಮ. ನಿಮಗೆ ದೇವರು ಉತ್ತಮ ಆರೋಗ್ಯ ಮತ್ತು ನೆಮ್ಮದಿಯನ್ನು ಕೊಡಲಿ” ಅಂತ ಅವರ ಜೊತೆಗಿನ ಫೋಟೋವನ್ನು ಹಾಕಿ ಪೋಸ್ಟ್ ಮಾಡಿದ್ದಾರೆ.ಪ್ರಿಯಾ ಅವರು ಟ್ವೀಟ್ ಮಾಡಿ ಶುಭಾಶಯ ಕೋರಿದ ಬಳಿಕ ಅಭಿಮಾನಿಗಳು ಕೂಡ ಸುದೀಪ್ ತಾಯಿಗೆ ಬರ್ತ್ ಡೇ ಶುಭಾಶಯವನ್ನು ಕೋರಿದ್ದಾರೆ. ಈಗಾಗಲೇ ಸುದೀಪ್ ಅವರು ತಮ್ಮ ಬರ್ತ್ ಡೇ ಪ್ರಯುಕ್ತ ಅಭಿಮಾನಿಗಳಿಗೆ ಸರ್ಪ್ರೈಸ್  ಕೊಟ್ಟಿದ್ದಾರೆ.`ಗುರುವಾರ ಸುದೀಪ್ ಅವರ ತಾಯಿ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ಪ್ರಿಯಾ ಟ್ವೀಟ್ ಮಾಡುವ ಮೂಲಕ ಬರ್ತ್ ಡೇ ಶುಭಾಶಯವನ್ನು ತಿಳಿಸಿದ್ದಾರೆ. ಸೆಪ್ಟೆಂಬರ್ 2ರಂದು ಸುದೀಪ್ ಅವರು ತಮ್ಮ ಹುಟ್ಟುವನ್ನು ಆಚರಿಸಿಕೊಳ್ಳಲಿದ್ದಾರೆ.ಕಿಚ್ಚ ಸುದೀಪ್ ಕಳೆದ ವರ್ಷ ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಗೂಗಲ್ ಪ್ಲಸ್ ನಲ್ಲಿ ಪೋಸ್ಟ್ ಪ್ರಕಟಿಸಿದ್ದರು. ಆದರೆ ಈ ಬಾರಿ ತಮ್ಮ ಅಸೋಸಿಯೇಟ್ ಮೂಲಕ ಹುಟ್ಟುಹಬ್ಬ ಆಚರಿಸಿಕೊಳ್ಳುವುದಾಗಿ ಕಿಚ್ಚ ಸುದೀಪ್ ಹೇಳಿದ್ದಾರೆ. ಕಳೆದ ವರ್ಷ ಸುದೀಪ್ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿರಲಿಲ್ಲ. ಆದರೆ ಈ ವರ್ಷ ತಮ್ಮ ಹುಟ್ಟುಹಬ್ಬದ ದಿನವನ್ನು ಅಭಿಮಾನಿಗಳಿಗೆ ಮೀಸಲಿಡಲಿದ್ದಾರೆ. ಆದರೆ ಆ ದಿನದಂದು ಖರ್ಚು ಮಾಡಬಾರದು, ಅಡಂಭರವಿರಬಾರದು. ನನಗಂತ ಏನೂ ತರಬೇಡಿ, ಶುಭಾಶಯ ತಿಳಿಸಿ ಅಷ್ಟೇ ಸಾಕು ಎಂದು ಸುದೀಪ್ ಮನವಿ ಮಾಡಿಕೊಂಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvHappy birthday Amma!May the Lord grant you with a healthy and peaceful life ahead ???????????? pic.twitter.com/vZtvhSjplL— Priya Sudeep/ಪ್ರಿಯ (@iampriya06) August 30, 2018Sign in to your account
Username or Email Address


Password

 Remember Me


