ಬೆಂಗಳೂರು: ಒನ್ ವೇನಲ್ಲಿ ದಾರಿಕೊಡಲಿಲ್ಲ ಎಂದು ಯುವಕರಿಬ್ಬರು ಟೆಕ್ಕಿಯೊಬ್ಬರ ಕಾರನ್ನು ಧ್ವಂಸಗೊಳಿಸಿದ್ದಾರೆ.ಟೆಕ್ಕಿ ವಿಜಯ್ ಕುಮಾರ್ ಅವರ ಕಾರನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಗುರುವಾರ ಸಂಜೆ ಬಸವನಗುಡಿಯ ಬುಲ್ ಟೆಂಪಲ್ ಬಳಿ ಈ ಘಟನೆ ನಡೆದಿದೆ. ವಿಜಯ್ ಕುಮಾರ್ ಅವರು ಒನ್ ವೇನಲ್ಲಿ ಬಂದಿದ್ದಕ್ಕೆ ಯುವಕರನ್ನು ಪ್ರಶ್ನಿಸಿದ್ದಾರೆ. ಆದ್ದರಿಂದ ಕೋಪಗೊಂಡು ಕಿಡಿಗೇಡಿಗಳು ಕಾರನ್ನು ಧ್ವಂಸಗೊಳಿಸಿದ್ದಾರೆ.ಗುರುವಾರ ಸಂಜೆ ವಿಜಯ್ ಕುಮಾರ್ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಒನ್ ವೇನಲ್ಲಿ ಇಬ್ಬರು ಯುವಕರು ಬಂದಿದ್ದಾರೆ. ಒನ್ ವೇನಲ್ಲಿ ಬಂದರೂ ಯುವಕರು ಸೈಡ್ ಬಿಡುವಂತೆ ಕೇಳಿದ್ದಾರೆ. ಆಗ ಪಕ್ಕದಲ್ಲಿ ಕಾರ್ ಗಳು ಪಾರ್ಕಿಂಗ್ ಆಗಿದ್ದರಿಂದ ಯುವಕರಿಗೆ ಸೈಡ್ ಬಿಡಲು ಸಾಧ್ಯವಾಗಲಿಲ್ಲ. ಇದಕ್ಕೆ ಕುಪಿತಗೊಂಡ ಇಬ್ಬರು ವಿಜಯ್ ಕುಮಾರ್ ಕಾರ್ ಮೇಲೆ ಏಕಾಏಕಿ ಅಟ್ಯಾಕ್ ಮಾಡಿ ಕಲ್ಲಿನಿಂದ ಹೊಡೆದು ಕಾರನ್ನು ಜಖಂಗೊಳಿಸಿದ್ದಾರೆ.ಆರೋಪಿಗಳು ಕಲ್ಲಿನಿಂದ ಹೊಡೆದಿದ್ದಕ್ಕೆ ಕಾರಿನ ಗ್ಲಾಸ್ ಜಖಂಗೊಂಡಿವೆ. ಬಳಿಕ ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಹನುಮಂತನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ವಿಜಯ್ ಕುಮಾರ್ ಅವರು ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


