ಧಾರವಾಡ: ಮಾನವ ಕುಲದ ಏಕತೆ ಹಾಗೂ ವಿಶ್ವಶಾಂತಿಗಾಗಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಸುಮಾರು 40 ಕಿಲೋ ಮೀಟರ್ ಉರುಳು ಸೇವೆಯನ್ನ ಆರಂಭಿಸಿದ್ದಾರೆ.ಜಿಲ್ಲೆಯ ಕಲಘಟಗಿ ತಾಲೂಕಿನ ಎಮ್ಮೇಟ್ಟಿ ಗ್ರಾಮದ ಈಶ್ವರ ತೋರಣಕಟ್ಟಿ ಅವರೇ ಈ ಉರುಳು ಸೇವೆಯನ್ನ ಆರಂಭಿಸಿದ್ದಾರೆ. ಧಾರವಾಡ ನಗರದ ಗಾಂಧಿಚೌಕದಿಂದ ತಮ್ಮ ಸೇವೆಯನ್ನ ಆರಂಭಿಸಿರುವ ಇವರು, ಮೂರು ದಿನಗಳ ನಂತರ ಎಮ್ಮೇಟ್ಟಿ ಗ್ರಾಮಕ್ಕೆ ತಲುಪಲಿದ್ದಾರೆ.ನಗರದ ರಸ್ತೆಗಳಲ್ಲೇ ಉರುಳು ಸೇವೆಯನ್ನ ಆರಂಭಿಸಿರುವ ಇವರು, ಸೆಪ್ಟೆಂಬರ್ 2 ರಂದು ತಮ್ಮ ಗ್ರಾಮಕ್ಕೆ ತಲುಪಲಿದ್ದಾರೆ. ಕಳೆದ 19 ವರ್ಷಗಳಿಂದ ಇವರು ಇದೇ ರೀತಿ ಸೇವೆಯನ್ನ ಮಾಡುತ್ತಾ ಬಂದಿದ್ದಾರೆ. ಉರುಳು ಸೇವೆ ಮಾಡುತ್ತಿರುವ ಇವರಿಗೆ ಅನೇಕರು ಸಾಥ್ ನೀಡಿದ್ದಾರೆ. ತಮ್ಮ ಉರುಳು ಸೇವೆಯ ನಂತರ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಕೂಡಾ ಇವರು ಇಟ್ಟುಕೊಂಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


