ಉಡುಪಿ: ಮೇಕಪ್ ಮಾಡಿಕೊಂಡು ಬರುವುದು ಗ್ಲಾಮರ್ ಅಲ್ಲ. ಜನರ ಪ್ರೀತಿ, ವಿಶ್ವಾಸವೇ ನಿಜವಾದ ಗ್ಲಾಮರ್ ಎಂದು ಶಾಸಕ ರಘುಪತಿ ಭಟ್, ಮಾಜಿ ಶಾಸಕ ಪ್ರಮೋದ್ ಮಧ್ವರಾಜ್‍ಗೆ ಟಾಂಗ್ ಕೊಟ್ಟಿದ್ದಾರೆ.ಪ್ರಮೋದ್ ಮಧ್ವರಾಜ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ರಘುಪತಿ ಭಟ್, ಕಾಂಗ್ರೆಸ್ಸಿನವರಿಗೆ ಗ್ಲಾಮರ್ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಅಧಿಕಾರ ಇರುವಾಗ ಕೆಲಸ ಮಾಡಿದರೆ ಗ್ಲಾಮರ್ ಉಳಿಯುತ್ತದೆ. ನಿಜವಾದ ಗ್ಲಾಮರ್ ಮಳೆ, ಗಾಳಿಗೆ ಏನೂ ಆಗುವುದಿಲ್ಲ. ಅದು ಜನರ ಕೆಲಸ ಮಾಡುವುದರಿಂದ ಬರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.ಸ್ಥಳೀಯ ಚುನಾವಣೆ ನಿಮಿತ್ತ ಬುಧವಾರ ಉಡುಪಿಯಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ, ಜಯಮಾಲಾರಷ್ಟು ಗ್ಲಾಮರ್ ಯಾರಿಗಿದೆ ಹೇಳಿ? ಶಿ ಈಸ್ ವೆರಿ ಗ್ಲಾಮರಸ್ ಡಿಸ್ಟ್ರಿಕ್ಟ್ ಮಿನಿಸ್ಟರ್ ಎಂದು ಮಧ್ವರಾಜ್ ಪ್ರಮೋದ್, ಸಚಿವೆ ಜಯಮಾಲಾ ಅವರನ್ನು ಹೊಗಳಿದ್ದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


