ಮೈಸೂರು: ಬಟ್ಟೆಯ ವಿಚಾರಕ್ಕಾಗಿ ಜಗಳವಾಡಿ, ಮನಸ್ತಾಪದಿಂದ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕಾಳಬಸವಹುಂಡಿ ಗ್ರಾಮದಲ್ಲಿ ನಡೆದಿದೆ.ಕಾಳಬಸವಹುಂಡಿ ಗ್ರಾಮದ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾದ ಅನು(16) ಹಾಗೂ ಕವಿತಾ (30) ಮೃತ ಸಹೋದರಿಯರು. ಚೂಡಿದಾರಕ್ಕಾಗಿ ಎಸ್‍ಎಸ್‍ಎಲ್‍ಸಿ ಓದುತ್ತಿದ್ದ ಅನು ಹಾಗೂ ಮೂಗಿಯಾಗಿದ್ದ ಅಕ್ಕ ಕವಿತಾ ಜಗಳವಾಡಿದ್ದರು. ಇದರಿಂದ ಮನನೊಂದ ಅನು ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.ಅನು ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು ಮೃತದೇಹದ ಮುಂದೆ ರೋಧಿಸುತ್ತಿದ್ದರು. ಈ ವೇಳೆ ಹಿತ್ತಲಿಗೆ ಹೋದ ಕವಿತಾ ಕೇಬಲ್ ವೈರ್ ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎರಡೂ ಮೃತ ದೇಹವನ್ನು ತಲಕಾಡು ಸಮುದಾಯ ಆಸ್ಪತ್ರೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಕುರಿತು ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


