ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಲವ್ ಜಿಹಾದ್ ಶಂಕೆಯ ಪ್ರಕರಣ ಬೆಳಕಿಗೆ ಬಂದಿದೆ. ಹಿಂದೂ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಮುಸ್ಲಿಂ ಯುವಕ ಕೈ ಕೊಟ್ಟು ಓಡಿ ಹೋದ ಪ್ರಕರಣ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.ಗರೀಬ್ ಪ್ರೀತಿಸಿ ಕೈಕೊಟ್ಟ ಮುಸ್ಲಿಂ ಯುವಕ. ಗರೀಬ್ ಹಿಂದೂ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದನು. ಯುವತಿ ನಾಲ್ಕು ತಿಂಗಳು ಗರ್ಭಿಣಿಯಾದ ಮೇಲೆ ಬಕ್ರೀದ್ ಹಬ್ಬಕ್ಕೆ ಹೋಗಿ ಬರುವುದಾಗಿ ಹೇಳಿ ಗರೀಬ್ ಎಸ್ಕೇಪ್ ಆಗಿದ್ದಾನೆ.ಯುವತಿ ಕಾಲ್ ಮಾಡಿ ಅಂಗಲಾಚಿದರೂ ಗರೀಬ್ ಮನೆಗೆ ಬಾರದೆ ಯುವತಿಯನ್ನು ಸತಾಯಿಸುತ್ತಿದ್ದಾನೆ. ಕಳೆದ ಫೆ. 6ರಂದು ಗರೀಬ್ ಮತ್ತು ಹಿಂದೂ ಯುವತಿ ಮದುವೆಯಾಗಿದ್ದರು. ಆದರೆ ಈಗ ಗರೀಬ್ ಪ್ರೀತಿಸಿ ಮದುವೆಯಾದ ತನ್ನ ಪತ್ನಿಗೆ ಕೈ ಕೊಟ್ಟು ಓಡಿ ಹೋಗಿದ್ದಾನೆ. ಸದ್ಯ ನೊಂದ ಯುವತಿ ಉತ್ತರ ವಿಭಾಗದ ಡಿಸಿಪಿಗೆ ದೂರು ನೀಡಿದ್ದಾರೆ.ದೂರಿನಲ್ಲಿ ಏನಿದೆ?
ನಾನು ಹಾಗೂ ನನ್ನ ಗಂಡ ಗರೀಬ್ 1 ವರ್ಷದಿಂದ ಪ್ರೀತಿಸುತ್ತಿದ್ದು, ಫೆಬ್ರವರಿ 16ರಂದು ಶಿವಗಂಗೆಯ ಬೆಟ್ಟದ ದೇವಸ್ಥಾನದಲ್ಲಿ ಮದುವೆಯಾಗಿ ಒಟ್ಟಿಗೆ ಬಾಳುತ್ತಿದ್ದೇವು. ಈಗ ನಾನು ನಾಲ್ಕು ತಿಂಗಳ ಗರ್ಭಿಣಿ ಆಗಿದ್ದೇನೆ. ಆದರೆ ಅವರು ಬಕ್ರೀದ್ ಹಬ್ಬಕ್ಕೆ ಅವರ ತಂದೆ-ತಾಯಿಯ ಮನೆಗೆ ಹೋಗಿ ಮತ್ತೇ ಹಿಂದಿರುಗಿ ಬಂದಿಲ್ಲ. ತಂದೆ-ತಾಯಿ ಜೊತೆ ಸೇರಿಕೊಂಡು ನನಗೆ ಮೋಸ ಮಾಡಿದ್ದಾನೆ. ಈಗ ಅವರಿಗೆ ಫೋನ್ ಮಾಡಿದರು ತೆಗೆಯುವುದಿಲ್ಲ.ಇಲ್ಲವೇ ಅವರ ತಂದೆ-ತಾಯಿ ಅವನನ್ನು ಕೂಡಿ ಹಾಕಿ ಬೇರೆ ಮದುವೆ ಮಾಡಲು ಹೊರಟಿದ್ದಾರಂತೆ. ದಯಮಾಡಿ ನನಗೆ ಅವನ ಜೊತೆ ಜೀವನ ನಡೆಸಲು ಸಹಕರಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಾನು ತಾಯಿ-ತಂದೆ ಇಲ್ಲದ ತಬ್ಬಲಿ ಹೆಣ್ಣು ಮಗಳು. ನನಗೆ ಅವರ ಜೊತೆ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂದು ಕೈಮುಗಿದು ಬೇಡಿಕೊಳ್ಳುತ್ತೇನೆ. ಅತಿ ಶೀಘ್ರವಾಗಿ ಕ್ರಮ ಕೈಗೈಗೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ.ನನಗೆ ಏನಾದರು ಮುಂದೆ ತೊಂದರೆಯಾದರೆ ಅದಕ್ಕೆ ನೇರ ಹೊಣೆ ಅವರು ಹಾಗೂ ಅವನ ತಂದೆ, ತಾಯಿ, ಅಕ್ಕ ತಂಗಿಯರು ಆಗಿರುತ್ತಾರೆ. ದಯಮಾಡಿ ನ್ಯಾಯ ಒದಗಿಸಬೇಕೆಂದು ನಿಮ್ಮಲ್ಲಿ ಕೋರಿಕೊಳ್ಳುತ್ತೇನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


