ಹಾಸನ: ಹೇಮಾವತಿ ನದಿಯಲ್ಲಿ ತೆಪ್ಪ ಮುಳುಗಿದ್ದರಿಂದ ಮಹಿಳೆ ನೀರು ಪಾಲಗಿರುವ ಘಟನೆ ಸಕಲೇಶಪುರ ತಾಲೂಕಿನ ಐಗೂರು ಬಳಿ ನಡೆದಿದೆ.ಸತತವಾಗಿ ಸುರಿದ ಮಳೆಯಿಂದ ಗ್ರಾಮದ ಸೇತುವೆ ಕೊಚ್ಚಿ ಹೋಗಿತ್ತು. ಹೀಗಾಗಿ ಸೌಮ್ಯ ಎಂಬವರು ಬುಧವಾರ ಸಂಜೆ ಕೃಷಿ ಕೆಲಸ ಮುಗಿಸಿ ತೆಪ್ಪದಲ್ಲಿ ನದಿ ದಾಟಬೇಕಿತ್ತು. ನದಿ ದಾಟುವಾಗ ತೆಪ್ಪ ಮುಗುಚಿದ್ದರಿಂದ ಸೌಮ್ಯ ನೀರು ಪಾಲಾಗಿದ್ದಾರೆ. ಈ ವೇಳೆ ತೆಪ್ಪದಲ್ಲಿ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯಕ್ಕೆ ಸೌಮ್ಯ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.ಸ್ಥಳೀಯರ ನೆರವಿನೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಸೌಮ್ಯಾಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


