ಚಿಕ್ಕಮಗಳೂರು: ನಡೆದಾಡುವ ದೈವ ಎಂದೇ ಖ್ಯಾತಿಯಾಗಿರುವ ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಸ್ವರ್ಣ ಪೀಠಿಕೇಶ್ವರಿ ಮಠದ ಅವಧೂತ ವಿನಯ್ ಗುರೂಜಿಯವರನ್ನ ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.ಇಂದು ಬೆಳಗ್ಗೆ ಸುಮಾರು 10.30ಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬೈಂದೂರು ಶಾಸಕ ಪ್ರಭಾಕರ್ ಶೆಟ್ಟಿ ಜೊತೆ ಯಡಿಯೂರಪ್ಪ ಆಗಮಿಸಿದ್ದಾರೆ. ಬಳಿಕ ಮಠದ ಒಳಗೆ ಹೋಗಿ ಸುಮಾರು 12.30ರ ತನಕ ಮೂರು ಗಂಟೆಗಳ ಕಾಲ ಮೂವರು ಸುರ್ದೀಘವಾಗಿ ಮಾತುಕತೆಯನ್ನು ನಡೆಸಿದ್ದಾರೆ. ನಂತರ ಅವರ ಆಶೀರ್ವಾದ ಪಡೆದುಕೊಂಡು ಹೋಗಿದ್ದಾರೆ. ಆದರೆ ಯಾವುದರ ಬಗ್ಗೆ ಮಾತನಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.ವಿನಯ್ ಗುರೂಜಿ ನಡೆದಾಡುವ ದೈವ ಎಂದೇ ಖ್ಯಾತಿಯಾಗಿದ್ದು, ಇತ್ತೀಚೆಗೆ ರಾಜಕಾರಣಿಗಳ ಭೇಟಿಯಿಂದ ಗುರೂಜಿ ಸಾಕಷ್ಟು ಸುದ್ದಿಯಾಗಿದ್ದರು. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಗುರೂಜಿಯ ಪಾದಪೂಜೆ ನಡೆಸಿದ್ದರು. ಅಷ್ಟೇ ಅಲ್ಲದೇ ಸ್ಪೀಕರ್ ರಮೇಶ್ ಕುಮಾರ್ ಗುರೂಜಿಗೆ ಆರತಿ ಬೆಳಗಿದ್ದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


