ಬೆಂಗಳೂರು: ನಾನು ರಾಜಕೀಯದಲ್ಲಿ ಇದ್ದೇನೆ. ಅದು ನನ್ನ ಜನ್ಮದ ಹಕ್ಕು ಎಂದು ನಿಖಿಲ್ ಕುಮಾರಸ್ವಾಮಿ ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ.ಪತ್ರಿಕೆಯೊಂದು ನೀವು ರಾಜಕೀಯ ಕ್ಷೇತ್ರಕ್ಕೆ ಬರುತ್ತಿರಾ ಎಂದು ಕೇಳಿದ್ದಕ್ಕೆ, ರಾಜಕೀಯ ಬಿಟ್ಟು ನನಗೆ ಇರೋದಕ್ಕೆ ಸಾಧ್ಯವೇ ಇಲ್ಲ. ನಾನು ಇರಬಾರದು ಎಂದು ಅಂದುಕೊಂಡರೂ ಕೂಡ ಜನ ನನ್ನನ್ನು ಬಿಡುತ್ತಿಲ್ಲ. ರಾಜಕೀಯದಿಂದ ಹೊರಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಉತ್ತರಿಸಿದ್ದಾರೆ.ನನ್ನ ತಂದೆ, ಪಕ್ಷದ ಬಗ್ಗೆ ಅಪಾರವಾದ ಜವಾಬ್ದಾರಿ ಇದೆ. ನನ್ನ ರಕ್ತದಲ್ಲೇ ರಾಜಕೀಯ ಇದೆ, ರಾಜಕೀಯ ಆಟ ಬಿಟ್ಟಿಲ್ಲ. ನಾನು ರಾಜಕೀಯ ಆಟದಿಂದ ಹೊರಗಿಲ್ಲ ಎಂದು ತಿಳಿಸಿದರು.ಸದ್ಯಕ್ಕೆ ನಾನು ರಾಜಕೀಯಕ್ಕೆ ಸೇರುವುದಿಲ್ಲ. ಸಿನಿಮಾ ನನಗೆ ಇಷ್ಟವಾಗಿರುವ ಕಾರಣ ಈಗ ನಾನು ಅಭಿನಯಿಸುತ್ತಿದ್ದೇನೆ ಎಂದು ಹೇಳಿದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


