ಚಿಕ್ಕಬಳ್ಳಾಪುರ: ಮುಂದಿನ ತಿಂಗಳು ಬರುವ ಗಣೇಶ ಹಬ್ಬಕ್ಕಾಗಿ ಬಲವಂತವಾಗಿ ಜನರ ಬಳಿ ಚಂದಾ ವಸೂಲಿ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಎಚ್ಚರಿಕೆ ನೀಡಿದ್ದಾರೆ.ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅನಿರುದ್ಧ್ ಶ್ರವಣ್ , ಗಣೇಶ ಹಬ್ಬದಲ್ಲಿ, ಪಟಾಕಿ ಸಿಡಿಸಿ, ಡಿಜೆ ಸೌಂಡ್ ಸಿಸ್ಟಮ್ ಗಳನ್ನ ಅಳವಡಿಸಿ ಪರಿಸರ ಮಾಲಿನ್ಯ ಮಾಡುವಂತೆ ಯಾವ ಶಾಸ್ತ್ರ ಸಂಪ್ರದಾಯದಲ್ಲೂ ಹೇಳಿಲ್ಲ. ಗಣೇಶ ಪ್ರತಿಷ್ಠಾಪನೆ ಹೆಸರಿನಲ್ಲಿ ಬಲವಂತವಾಗಿ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.ಒಂದು ವೇಳೆ ಜನರೇ ಚಂದಾ ಕೊಡಲು ಇಷ್ಟ ಪಟ್ಟರೆ ವಿಶ್ವಾಸವಿರುವ ಸಂಘ ಸಂಸ್ಥೆಗಳಿಗೆ ಮಾತ್ರ ನಿಮ್ಮ ಹಣವನ್ನು ನೀಡಬಹುದು. ಗಣೇಶ ವಿಗ್ರಹ ಪ್ರತಿಷ್ಠಾಪಿಸುವ ಸಂಘ ಅಥವಾ ವ್ಯಕ್ತಿ ಜಿಲ್ಲಾಡಳಿತದ ನಿಯಮಗಳನ್ನು ಪಾಲಿಸಬೇಕಿದೆ. ಇದೇ ವೇಳೆ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತೆ ಜಿಲ್ಲಾಧಿಕಾರಿಗಳು ಜನರಲ್ಲಿ ಮನವಿ ಮಾಡಿಕೊಂಡರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


