ಕಾರವಾರ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮುಂದೆಯೇ ಟಿಕೆಟ್ ವಂಚನೆಗೊಳಗಾದವರು ಒಬ್ಬರಿಗೊಬ್ಬರು ಕಿತ್ತಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ.ಬಿಜೆಪಿ ಮಹಿಳಾ ಮೋರ್ಚಾ ಮುಖಂಡೆ ಸುಮನಾ ಕುಲಕರ್ಣಿ ಹಾಗೂ ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷ ಫಣಿರಾಜ್ ನಡುವೆ ಕಿತ್ತಾಟ ನಡೆದಿದೆ. ಮುಂಡಗೋಡಿನ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಫಣಿರಾಜ್ ಹಾಗೂ ಆತನ ಪತ್ನಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗಿತ್ತು. ಇಂದು ಕೇಂದ್ರ ಸಚಿವ ಅನಂತ್ ಕುಮಾರ್ ನೇತೃತ್ವದಲ್ಲಿ ಪಟ್ಟಣದಲ್ಲಿ ಚುನಾವಣೆ ಸಂಬಂಧ ಅಭ್ಯರ್ಥಿಗಳ ಹಾಗೂ ಮುಖಂಡರ ಸಭೆ ಕರೆಯಲಾಗಿತ್ತು.ಸಭೆಯಲ್ಲಿ ಸಚಿವರ ಮುಂದೆ ತನಗೆ ಟಿಕೆಟ್ ನೀಡದೆ ಗಂಡ-ಹೆಂಡತಿಗೆ ಟಿಕೆಟ್ ನೀಡಿರುವುದಾಗಿ ಸುಮನಾ ಅಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸುಮನಾ ವಿರುದ್ಧ ಸಿಟ್ಟಾಗಿ ಕಿಡಿಕಾರಿದ ಫಣಿರಾಜ್, ಇಬ್ಬರೂ ಸಚಿವರ ಮುಂದೆಯೇ ಕಿತ್ತಾಡಿಕೊಂಡರು. ಕಿತ್ತಾಟ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಸಚಿವ ಅನಂತ್ ಕುಮಾರ್ ಹೆಗಡೆ ಘಟನೆಯ ವಿಡಿಯೋ ಚಿತ್ರಕರಣ ಮಾಡದಂತೆ ತಡೆದಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


