ಕಲಬುರಗಿ: ಹೈಕಮಾಂಡ್ ಒತ್ತಡಕ್ಕೆ ಮಣಿದು ಕಾಂಗ್ರೆಸ್-ಜೆಡಿಎಸ್ ಮದುವೆಯಾಗಿದೆ. ಈಗಾಗಲೇ ಪಕ್ಷಗಳ ನಡುವೆ ಜಗಳ ಶುರುವಾಗಿದ್ದು, ಸಿದ್ದರಾಮಯ್ಯ ಯುರೋಪ್ ದೇಶದ ಪ್ರವಾಸದ ಬಳಿಕ ವಿಚ್ಛೇದನ ಆಗಲಿದೆ ಅಂತ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು ಕುಮಾರಸ್ವಾಮಿ ಸರ್ಕಾರದ ಅಂತಿಮ ಘಂಟೆ ಬಾರಿಸಲು ಸಿದ್ದು ಯುರೋಪ್ ಪ್ರವಾಸ ಕೈಗೊಂಡಿದ್ದಾರೆ. ಸಿದ್ದರಾಮಯ್ಯ ಜೊತೆ ಕಂದಾಯ ಸಚಿವರಾದ ಆರ್ ವಿ ದೇಶಪಾಂಡೆ, ಕೆಜೆ ಜಾರ್ಜ್ ಸೇರಿ 30-40 ಶಾಸಕರು ಹೊರಟಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಶಾಂತಿವನಕ್ಕೆ ಹೋಗಿ ಅಶಾಂತಿ ಸೃಷ್ಟಿಸಿದ್ದರು. ಈಗ ನಡೆಯುತ್ತಿರುವುದು ಆಪರೇಶನ್ ಕಮಲ ಅಲ್ಲ ಆಪರೇಶನ್ ಸಿದ್ದರಾಮಯ್ಯ. ಕೊಡಗು ಜಿಲ್ಲೆಯ ಪ್ರವಾಹ, ಉತ್ತರ ಕರ್ನಾಟಕದಲ್ಲಿನ ಬರಗಾಲದ ನಡುವೆಯೂ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಸಿದ್ದರಾಮಯ್ಯ ಅವರ ಜೊತೆ ವಿದೇಶ ಯಾತ್ರೆ ಕೈಗೊಂಡಿದ್ದಾರೆ ಅಂತ ಕಿಡಿಕಾರಿದರು.ಇದೇ ವೇಳೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದು ಅವರು, ರಾಹುಲ್ ಗಾಂಧಿ ಒಬ್ಬ ಇಮ್ ಮೆಚ್ಯೂರ್ಡ್ ಲೀಡರ್. ವಿದೇಶದಲ್ಲಿ ಅವರ ಹೇಳಿಕೆ ಮಾತುಗಳನ್ನು ಮಾತಾಡೋದು ನೋಡಿದರೆ ನಮಗೆ ಅವಮಾನವಾಗುತ್ತದೆ. ಆರ್‍ಎಸ್‍ಎಸ್ ಬಗ್ಗೆ ಮಾತಾಡೋಕೆ ಅವರಿಗೇನು ಹಕ್ಕಿದೆ. ಭಾರತೀಯ ಸಂಸ್ಕೃತಿ ತಿಳಿದುಕೊಂಡಿದ್ದೀರಾ? ಏನೂ ಇಲ್ದೆ ಪ್ರಚಾರದ ಸಲುವಾಗಿ ಟೀಕೆ ಮಾಡ್ತೀರಾ ಅಂತ ಪ್ರಶ್ನೆ ಮಾಡಿದರು. ಇದು ನಿಮ್ಮ ನಾಶಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


