ಧಾರವಾಡ: ಕುದುರೆ ರೇಸ್ ನಡೆಯುತ್ತಿದ್ದ ವೇಳೆ ಬೈಕೊಂದು ಕಾರಿಗೆ ಡಿಕ್ಕಿ ಹೊಡೆದಿರುವ ಘಟನೆ ಜಿಲ್ಲೆಯ ಹೊರವಲಯದ ನಗರ ಸೌದತ್ತಿ ರಸ್ತೆಯಲ್ಲಿ ನಡೆದಿದೆ.ಸೋಮವಾರ ಸಂಜೆ ವೇಳೆ ರಾಜ್ಯ ಹೆದ್ದಾರಿಯಲ್ಲಿ ಪೊಲೀಸರ ಯಾವುದೇ ಅನುಮತಿ ಇಲ್ಲದೇ ಕುದುರೆ ಗಾಡಿ ರೇಸ್ ನಡೆಸಲಾಗಿತ್ತು. ರೇಸ್ ನಲ್ಲಿ ಸುಮಾರು 15 ಕ್ಕೂ ಹೆಚ್ಚು ಕುದುರೆ ಗಾಡಿ ಭಾಗವಹಿಸಿದ್ದವು. ಕುದುರೆ ಗಾಡಿಗಳ ಓಟದ ನಡುವೆ ಬೈಕ್ ಗಳ ರೇಸ್ ನಡೆದಿದೆ. ಈ ವೇಳೆ ಬೈಕೊಂದು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಮೇಲಿದ್ದ ಯುವಕ ಸ್ವಲ್ಪದರಲ್ಲಿ ಬಚಾವ್ ಆಗಿದ್ದರಿಂದ ಯಾವುದೇ ಅಪಾಯಗಳು ಸಂಭವಿಸಿಲ್ಲ.ಬೈಕ್ ಸತೀಶ ಹೆಗಡೆ ಎಂಬವರ ಕಾರಿಗೆ ಡಿಕ್ಕಿ ಹೊಡೆದಿದ್ದು, ಈ ಘಟನೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvhttps://youtu.be/zZPzISoy0QwSign in to your account
Username or Email Address


Password

 Remember Me


