ಬೆಳಗಾವಿ: 20 ವರ್ಷಗಳಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಜಾರಕಿಹೊಳಿ ಕುಟುಂಬ ಬೆಳೆಸಿದೆ. ಶಾಸಕರಾದ ಮೇಲೆ ಜಾತಿ ನೆಪ ಹೇಳುವುದು ಸರಿಯಲ್ಲ. ಸಂಖ್ಯೆ ಬಹಳಷ್ಟು ದಿನ ಉಳಿಯಲ್ಲ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಪಿಎಲ್‍ಡಿ ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಹಿನ್ನಲೆ ಅಹೋರಾತ್ರಿ ಪ್ರತಿಭಟನೆ ಕೈಗೊಂಡಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವರು, ಪಿಎಲ್‍ಡಿ ಬ್ಯಾಂಕಿಗೆ 20 ವರ್ಷದಿಂದ ರಾಜಕೀಯ ಮುಕ್ತ ಚುನಾವಣೆ ನಡೆಯುತ್ತಿತ್ತು. ಸಚಿವರು, ಶಾಸಕರು ಯಾರೊಬ್ಬರು ಪಾಲ್ಗೊಂಡಿರಲಿಲ್ಲ. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ನಿರ್ದೇಶಕರಿಗೆ ಆಮಿಷವೊಡ್ಡಿದ್ದಾರೆ ಹಾಗೂ ಗುಂಪುಗಾರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಈ ಹಿಂದಿನ ಪದ್ಧತಿಯಲ್ಲಿ ಚುನಾವಣೆ ನಡೆಸಲು ನಮ್ಮದು ಸಲಹೆ ಇದೆ. ಅವಿರೋಧವಾಗಿ ಆಯ್ಕೆ ಆಗಿರುವವರು ಶಾಸಕಿ ಹೆಬ್ಬಾಳ್ಕರ್ ಜೊತೆಗೆ ಹೋಗಿದ್ದಾರೆ. ಎಲ್ಲರೂ ಸೇರಿ ಕೆಲಸ ಮಾಡುವ ನಿರೀಕ್ಷೆ ಹೊಂದಿದ್ದೇವು. ಆದರೆ ಇದು ಹುಸಿಯಾಗಿದೆ. ಚುನಾವಣೆ ಮುಂದೂಡಿಕೆ ಚುನಾವಣಾ ಅಧಿಕಾರಿಗೆ ಅಧಿಕಾರವಿದೆ. ಪ್ರತಿಭಟನೆಯಿಂದ ಯಾವುದೇ ಪ್ರಯೋಜವಿಲ್ಲ ಎಂದ ಅವರು, ಒಂದೇ ಪಕ್ಷದಲ್ಲಿ ಇದ್ದರೂ ಗುಂಪುಗಾರಿಕೆ ಮಾಡುವುದು ಸಹಜವಾಗಿದೆ. ಈಗಲೂ ಕಾಲ ಮಿಂಚಿಲ್ಲ ಎಲ್ಲರನ್ನೂ ಒಮ್ಮತದಿಂದ ಕರೆದುಕೊಂಡು ಹೋದರೆ ಸ್ವಾಗತ ಎಂದು ಎಚ್ಚರಿಕೆ ನೀಡಿದರು. ಇದನ್ನು ಓದಿ: ಬೆಳಗಾವಿಯಲ್ಲಿ ಮಿಡ್‍ನೈಟ್ ಹೈಡ್ರಾಮಾ – ಪಿಎಲ್‍ಡಿ ಬ್ಯಾಂಕ್ ಎಲೆಕ್ಷನ್ ಮುಂದೂಡಿಕೆ ರಾಜಕೀಯಮೊದಲ ಭಾರಿ ಗೆದ್ದು, ಈಗ ಮೆರೆಯುತ್ತಿರುವುದು ಸರಿಯಲ್ಲ ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಎಚ್ಚರಿಕೆ ನೀಡಿದ್ದಾರೆ. ಪಿಎಲ್‍ಡಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ರಾಜಕೀಯ ಸರಿಯಲ್ಲ. ಅಧಿಕಾರಿಗಳ ಸಭೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಸ್ಪಷ್ಟನೆ ನೀಡಿದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


