ಬಳ್ಳಾರಿ: ಟ್ಯಾಕ್ಟರ್ ಆಯ ತಪ್ಪಿ ಪಲ್ಟಿಯಾದ ಪರಿಣಾಮ 26 ಜನರು ಗಾಯಗೊಂಡಿದ್ದು, ಆರು ಮಂದಿಯ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಹಂಪಿ ಬಳಿ ನಡೆದಿದೆ.ಹಂಪಿಯ ಕೃಷ್ಣ ಬಜಾರ್ ಸಮೀಪ ಈ ಅಪಘಡ ಸಂಭವಿಸಿದೆ. ಇವರೆಲ್ಲರೂ ಹೊಸಪೇಟೆ ತಾಲೂಕಿನ ಮಲಪನಗುಡಿಯಿಂದ ಹಂಪಿಗೆ ಗಂಗೆ ಪೂಜೆಗೆಂದು ತೆರಳಿದ್ದರು. ಭಕ್ತರು ಗಂಗೆ ಪೂಜೆ ನೆರವೇರಿಸಿ ಹಿಂದಿರುಗಿ ಬರುವ ಸಂದರ್ಭದಲ್ಲಿ ಕೃಷ್ಣ ಬಜಾರ್ ಸಮೀಪ ಟ್ಯಾಕ್ಟರ್ ಆಯತಪ್ಪಿ ಬಿದ್ದು, ಪಲ್ಟಿಯಾಗಿ ಅಪಘಾತ ಸಂಭವಿಸಿದೆ.ಈ ಘಟನೆಯಲ್ಲಿ 26 ಜನರಿಗೆ ಗಾಯವಾಗಿದ್ದು, ರಾಜು(10), ಬೈರ (19), ಶಂಕರ(17), ಉಮೇಶ(10), ಪಕ್ಕಿರಮ್ಮ(40) ಮತ್ತು ತಾಯಮ್ಮ (40) ಎಂಬವರ ಸ್ಥಿತಿ ಗಂಭೀರವಾಗಿದೆ. ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ಬಳ್ಳಾರಿಯ ಆಸ್ಪತ್ರೆಗೆ ಹೆಚ್ಚಿನ ಚಿಕ್ಸಿತ್ಸೆಗಾಗಿ ರವಾನಿಸಲಾಗಿದೆ. ಉಳಿದ ಗಾಯಾಳುಗಳಿಗೆ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಈ ಘಟನೆಯ ಕುರಿತು ಹಂಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


