ಬೆಂಗಳೂರು: `ಒಡೆಯ’ ಚಿತ್ರತಂಡ ಕನ್ನಡದ ಹುಡುಗಿಯರಿಗೆ ಒಂದು ವಿಶೇಷ ಆಫರ್ ನೀಡುವ ಮೂಲಕ ಹೊಸಬರಿಗೆ ನಟ ದರ್ಶನ್ ಜೊತೆ ಅಭಿನಯಿಸಲು ಅವಕಾಶ ಮಾಡಿಕೊಟ್ಟಿದೆ.ದರ್ಶನ್ ಅವರ ನಟನೆಯ 52ನೇ ಚಿತ್ರ `ಒಡೆಯ’. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಇದೀಗ ಈ ಚಿತ್ರಕ್ಕಾಗಿ ನಟಿಯ ಆಯ್ಕೆ ನಡೆಯುತ್ತಿದೆ. ಕಳೆದ ಒಂದು ವಾರದಿಂದ ನಟಿ ಆಯ್ಕೆ ಪ್ರಕ್ರಿಯೆಯಲ್ಲಿ ಚಿತ್ರತಂಡ ತೊಡಗಿದೆ. ಆದರೆ ಇನ್ನು ದರ್ಶನ್ ಜೊತೆ ಅಭಿನಯಿಸುವ ನಾಯಕಿ ಅಂತಿಮವಾಗಿಲ್ಲ.ಈ ಸಿನಿಮಾ ಬಣ್ಣದ ಲೋಕದ ಕನಸು ಹೊತ್ತು ಚಿಕ್ಕದೊಂದು ಅವಕಾಶಕ್ಕಾಗಿ ಕಾಯುತ್ತಿರುವ ಹುಡುಗಿಯರಿಗಾಗಿ ಒಂದು ಅವಕಾಶ ನೀಡಿದೆ. ಅಂದರೆ ಈ ಸಿನಿಮಾದಲ್ಲಿ ಅಭಿನಯಿಸಲು ನಮ್ಮ ಕನ್ನಡ ಮಣ್ಣಿನ ಹುಡುಗಿಯೇ ಆಗಿರಬೇಕು. ಅಷ್ಟೇ ಅಲ್ಲದೇ ಈ ಸಿನಿಮಾಗೆ ವರ್ಕ್ ಮಾಡುವ ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು ಕನ್ನಡದವರೇ ಆಗಿರಬೇಕು ಅಂತ ದರ್ಶನ್ ಅವರು ಹೇಳಿದ್ದಾರಂತೆ.ಹೌದು, ದುಡ್ಡು ಹಾಕೋರು ಕನ್ನಡದವರು, ಸಿನಿಮಾನ ನಿರ್ಮಾಣ ಮಾಡುವವರು ಕನ್ನಡದವರು. ಆದ್ದರಿಂದ ನಾವ್ಯಾಕೆ ಪರಭಾಷಾ ನಟಿಯರಿಗೆ ಮಣೆ ಹಾಕಬೇಕು ಅನ್ನೋದು ದರ್ಶನ್ ಮೊದಲ ಪ್ರಶ್ನೆಯಾಗಿದ್ದು, ತಮ್ಮ ಜೊತೆ ತೆರೆ ಹಂಚಿಕೊಳ್ಳುವರು ಕನ್ನಡದ ಹುಡುಗಿ ಆಗಿರಬೇಕು ಅಂತ ಬಯಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡಿರುವ ಬಹುತೇಕ ನಟಿಯರು ಕನ್ನಡದವರಾಗಿದ್ದು, ರಮ್ಯಾ, ರಕ್ಷಿತಾ, ರಾಧಿಕಾರಿಂದ ಹಿಡಿದು ಪ್ರಣೀತಾ, ರಚಿತಾವರೆಗೂ ಹಲವು ಕನ್ನಡದ ಬೆಡಗಿಯರು ದರ್ಶನ್ ಜೊತೆ ತೆರೆಹಂಚಿಕೊಂಡು ಸ್ಟಾರ್ ಹೀರೋಯಿನ್‍ಗಳಾಗಿ ಮಿಂಚಿದ್ದಾರೆ. ಇದೀಗ ಮತ್ತೊಬ್ಬ ಕನ್ನಡತಿಗೆ ದಚ್ಚು ಜೊತೆ ಅಭಿನಯಿಸಲು ಅವಕಾಶ ಸಿಗುತ್ತಿದೆ.`ಒಡೆಯ’ ಸಿನಿಮಾ ಬಿಗ್ ಬಜೆಟ್‍ನಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದ್ದು, ಪ್ರತಿಯೊಂದು ಸೀನಿನಲ್ಲೂ 10-15 ಜನ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ದೇವರಾಜ್, ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ, ಚಿತ್ರಾಶೆಣೈ, ಪಂಕಜ್, ಯಶಸ್ ಸೂರ್ಯ, ಶರತ್ ಲೋಹಿತಾಶ್ವ, ಅವಿನಾಶ್, ಸೇರಿದಂತೆ ಹಲವರನ್ನ ಚಿತ್ರಕ್ಕೆ ಆಯ್ಕೆಮಾಡಲಾಗಿದೆ.`ಒಡೆಯ’ ಸಿನಿಮಾವನ್ನು ಎಂ.ಡಿ.ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಶ್ರೀಧರ್ ದರ್ಶನ್ ಜೊತೆಗೆ `ಬುಲ್ ಬುಲ್’ ಸಿನಿಮಾವನ್ನು ಮಾಡಿದ್ದರು. ಈ ಸಿನಿಮಾದ ನಂತರ ಮತ್ತೆ ಈ ಜೋಡಿ ಒಂದಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv






 Advertisement 




Sign in to your account
Username or Email Address


Password

 Remember Me


