ರಾಯಚೂರು: ನಗರದಲ್ಲಿ ಹಮ್ಮಿಕೊಂಡಿದ್ದ ಆರ್‌ಎಸ್‌ಎಸ್‌ ಬೈಠಕ್ ಹಾಗೂ ಕಾರ್ಯಕಾರಣಿ ಸಭೆಗೆ ಮುಖ್ಯಸ್ಥ ಮೋಹನ್ ಭಾಗವತ್‍ರವರು ದೆಹಲಿಯಿಂದ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ನಗರಕ್ಕೆ ಆಗಮಿಸಿದ್ದಾರೆ.ಮೋಹನ್ ಭಾಗವತ್‍ರವರಿಗೆ ಝಡ್ ಫ್ಲಸ್ ಹಾಗೂ ಸಿಐಎಸ್‍ಎಫ್ ನಿಂದ ವಿಶೇಷ ಭದ್ರತೆ ನೀಡಲಾಗಿದ್ದು, ಮೂರು ದಿನಗಳ ರಾಯಚೂರು ಹಾಗೂ ಎರಡು ದಿನಗಳ ಮಂತ್ರಾಲಯದಲ್ಲಿ ನಡೆಯುವ ಆರ್‌ಎಸ್‌ಎಸ್‌ ಬೈಠಕ್ ಹಾಗೂ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋಹನ್ ಭಾಗವತ್‍ರವರು ನಗರದ ಹಿಂದೂ ವರ್ಧಮಾನ ಶಾಲೆ ಪಕ್ಕದ ಲಾಲ್ ಜೀ ಪಟೇಲ್ ಎಂಬವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದನ್ನೂ ಓದಿ: ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿಗೆ ಆಹ್ವಾನ?ಇಂದಿನಿಂದ ನಡೆಯಲಿರುವ ಮೂರು ದಿನಗಳ ಕಾರ್ಯಕಾರಣಿ ಸಭೆಯನ್ನು ಲಾಲ್ ಜೀಯವರ ಮನೆಯಲ್ಲೇ ನಡೆಸಲು ಸಂಘ ತೀರ್ಮಾನಿದೆ. ಅಲ್ಲದೇ ಸೆಪ್ಟೆಂಬರ್ 1 ರಿಂದ ಮಂತ್ರಾಲಯದಲ್ಲಿ ನಡೆಯುವ ಎರಡು ದಿನಗಳ ಸಭೆಯನ್ನು ತಿರುಮಲ ವಸತಿ ಗೃಹದಲ್ಲಿ ನಡೆಸಲು ತೀರ್ಮಾನಿಸಿದ್ದಾರೆ. ಮಂತ್ರಾಲಯದಲ್ಲಿ ನಡೆಯುವ ಬೈಠಕ್‍ಗೆ ಬಿಜೆಪಿ ರಾಷ್ಯಾಧ್ಯಕ್ಷ ಅಮಿತ್ ಶಾ ಕೂಡ ಆಗಮಿಸಲಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


