ಮಂಡ್ಯ: ಗಂಡನ ಮೇಲಿನ ಕೋಪಕ್ಕೆ ಆತನ ಕಾರನ್ನು ಹೆಂಡತಿಯೇ ಕಲ್ಲಿನಿಂದ ಜಖಂಗೊಳಿಸಿರುವ ಘಟನೆ ಜಿಲ್ಲೆಯ ನಾಗಮಂಗಲದ ತಿಟ್ಟನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.ಶ್ರೀನಿವಾಸ್ ಮತ್ತು ಭಾಗ್ಯ 14 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಇತ್ತೀಚೆಗೆ ಪತಿ-ಪತ್ನಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಇದರಿಂದ ಗಂಡನ ಮೇಲಿನ ಕೋಪದಿಂದ ಭಾಗ್ಯ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮುಂದಿನ ಗಾಜಿನ ಮೇಲೆ ಕಲ್ಲನ್ನು ಎಸೆದು ಜಖಂಗೊಳಿಸಿದ್ದಾರೆ.ಹೆಂಡತಿ ನನ್ನ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರಹಾಕಿದ್ದಾಳೆ ಎಂದು ಪತಿ ಶ್ರೀನಿವಾಸ್ ಆರೋಪ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ತಮ್ಮಿಬ್ಬರ ಜಗಳವನ್ನು ಶ್ರೀನಿವಾಸ್ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡು ಹೆಂಡತಿ ನನಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಪತಿಯ ಆರೋಪವನ್ನು ಪತ್ನಿ ಗೀತಾ ತಳ್ಳಿ ಹಾಕಿದ್ದು, ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


