ಹುಬ್ಬಳ್ಳಿ: ತಾಯಿಯ ಕರುಳ ಬಳ್ಳಿಯ ಸಂಬಂಧಕ್ಕೆ ಸಾಟಿ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇಂತಹದ್ದೆ ಒಂದು ಘಟನೆ ನಗರದಲ್ಲಿ ನಡೆದು ಜನರ ಕಣ್ಣೀರು ತರಿಸುವಂತೆ ಮಾಡಿದೆ. ತಾಯಿ ಹಸುವನ್ನು ಕರುವಿನಿಂದ ಬೇರ್ಪಡಿಸಲು ಹೋದ ಪಾಲಿಕೆ ಸಿಬ್ಬಂದಿಯೇ ಕರುಳ ಬಳ್ಳಿಯ ಸಂಬಂಧಕ್ಕೆ ಶರಣಾಗಿ ಕರುವನ್ನು ತಾಯಿಯ ಬಳಿಯೇ ಬಿಟ್ಟು ಬಂದಿದ್ದಾರೆ.ಹುಬ್ಬಳ್ಳಿಯ ಸ್ಟೇಷನ್ ರಸ್ತೆಯ ಸುಜಾತ ಚಿತ್ರಮಂದಿರದ ಹತ್ತಿರ ತಾಯಿ ಹಸುವಿಗೆ ಗಾಯವಾಗಿ ನೋವಿನಿಂದ ಪರದಾಡುತ್ತಿತ್ತು. ಕರು ಹಾಲು ಕುಡಿಯಲು ಹೋಗಿ ತಾಯಿ ಹಸುವಿನ ಮೊಲೆಗೆ ಮತ್ತಷ್ಟು ಸಮಸ್ಯೆಯಾಗಬಾರದು. ಕರುವಿಗೆ ಬೇರೆ ಕಡೆ ಆಹಾರವನ್ನಾದರು ನೀಡಬೇಕು ಎಂದು ಮಹಾನಗರ ಪಾಲಿಕೆ ಕರುವನ್ನು ವಾಹನದಲ್ಲಿ ಕರೆದೊಯ್ಯುವ ಕೆಲಸ ಮಾಡಿದ್ದಾರೆ.ಆದರೆ ಕರುವನ್ನು ವಾಹನದಲ್ಲಿ ಕರೆದುಕೊಂಡು ಹೋಗುವುದನ್ನು ನೋಡಿದ ತಾಯಿ ಹಸು ಆ ವಾಹನವನ್ನು ಮುಂದೆ ಹೋಗಲು ಬಿಡದೇ, ವಾಹನ ಸುತ್ತು ಹಾಕಿದೆ. ತಾಯಿ ಹಸುವಿನ ತೋಳಲಾಟ ಪಾಲಿಕೆ ಸಿಬ್ಬಂದಿ ಹಾಗೂ ಸಾರ್ವಜನಿಕರ ಮನ ಕಲುಕುವಂತೆ ಮಾಡಿತ್ತು. ಕೊನೆಗೆ ಪಾಲಿಕೆ ಸಿಬ್ಬಂದಿ ಹಸು ಹಾಗೂ ಕರುವನ್ನು ಬೇರೆ ಮಾಡುವ ಕೆಲಸವನ್ನು ಮಾಡದೆ ಅಲ್ಲಿಂದ ಮರಳಿದರು.https://www.youtube.com/watch?v=VHPIj4RljT8&feature=youtu.beಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


