ಬೆಂಗಳೂರು: ಪತ್ನಿ ಇದ್ದರೆ ನನ್ನ ಹತ್ತಿರನೇ ಇರಬೇಕು ಬೇರೆ ಇರಬಾರದೆಂದು ಪತಿಯೊಬ್ಬ ತನ್ನ ಪತ್ನಿ ಕಿಡ್ನಾಪ್ ಆಗಿದ್ದಾಳೆಂದು ದೂರು ನೀಡಿದ್ದಕ್ಕೆ ಮಡಿವಾಳ ಪೊಲೀಸರು ಆತನನ್ನೇ ಬಂಧಿಸಿದ್ದಾರೆ.ಹುಸೇನ್ ಪೊಲೀಸ್ ಠಾಣೆಗೆ ದೂರು ನೀಡಿ ಅರೆಸ್ಟ್ ಆದ ಪತಿ. ನನ್ನ ಪತ್ನಿ ಶಬೀನಾಳನ್ನು ಯಾರೋ ದುಷ್ಕರ್ಮಿಗಳು ಕಾರಿನಲ್ಲಿ ಬಂದು ಅಪಹರಣ ಮಾಡಿದ್ದಾರೆ. ಆಕೆಯನ್ನು ಅಪಹರಣ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಕೊಲೆ ಮಾಡುತ್ತಾರೆ ಎಂದು ಹುಸೇನ್ ದೂರು ನೀಡಿದ್ದನು. ದೂರು ಸ್ವೀಕರಿಸಿದ ಬಳಿಕ ಪತಿ ಹುಸೇನ್ ಅಸಲಿಯತ್ತು ಅನಾವರಣಗೊಂಡಿದೆ.ಶಬೀನಾ ಬೇರೊಬ್ಬನ ಜೊತೆ ಸಂಬಂಧ ಬೆಳೆಸಿ ಅವನೊಂದಿಗೆ ಇರೋದಾಗಿ ಮನೆ ಬಿಟ್ಟು ಹೋಗಿದ್ದಳು. ಅವನೊಂದಿಗೆ ಪತ್ನಿ ನೆಮ್ಮದಿಯಾಗಿ ಇರುತ್ತಾಳೆ ಅಂತ ಶಬೀನಾ ಬಾಯ್ ಫ್ರೆಂಡ್ ನನ್ನು ಜೈಲಿಗೆ ಕಳುಹಿಸಲು ಹುಸೇನ್ ಸ್ಕೆಚ್ ಹಾಕಿದ್ದನು. ಹೀಗಾಗಿ ಬಾಯ್ ಫ್ರೆಂಡ್ ಜೈಲಿಗೆ ಹೋದರೆ ಪತ್ನಿ ಮತ್ತೆ ವಾಪಸ್ ಬರುತ್ತಾಳೆ ಎಂದು ಹುಸೇನ್ ದೂರು ನೀಡಿದ್ದನು.ಈ ಬಗ್ಗೆ ತನಿಖೆ ಮಾಡಿದಾಗ ನಿಜಾಂಶ ಹೊರ ಬಂದಿದೆ. ಪರಿಣಾಮ ದೂರು ನೀಡಿದ ಹುಸೇನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಸತ್ಯ ಗೊತ್ತಿದ್ದರೂ ಪೊಲೀಸರಿಗೆ ಸುಳ್ಳು ಮಾಹಿತಿ ನೀಡುತ್ತೀಯಾ ಎಂದು ಮಡಿವಾಳ ಪೊಲೀಸರು ಹುಸೇನ್‍ನನ್ನು ಬಂಧಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


