ಸಾಂರ್ದಭಿಕ ಚಿತ್ರಮೈಸೂರು: ಜೆರಾಕ್ಸ್ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಮಹಿಳೆಯನ್ನು ವಿದ್ಯಾರಣ್ಯಪುರಂ ಪೊಲೀಸರು ಬಂಧಿಸಿ 8,800 ರೂ. ಮೌಲ್ಯದ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.ಮೈಸೂರಿನ ಜ್ಯೋತಿ ನಗರದ ನಿವಾಸಿಯಾ ಗೌರಮ್ಮ(40) ಬಂಧಿತ ಆರೋಪಿ. ವಿದ್ಯಾರಣ್ಯಪುರಂ ನಲ್ಲಿ ಬೀದಿಬದಿ ವ್ಯಾಪಾರಸ್ಥರ ಬಳಿ ನೋಟು ಚಲಾವಣೆ ಮಾಡುವ ವೇಳೆ ಗೌರಮ್ಮ ಸಿಕ್ಕಿಬಿದ್ದಿದ್ದಾಳೆ. ಆದರೆ ತಿಲಕ್ ನಗರದಲ್ಲಿ ಜೆರಾಕ್ಸ್ ಅಂಗಡಿ ನಡೆಸುತ್ತಿದ್ದ ಖಲೀಲ್ ನಾಪತ್ತೆಯಾಗಿದ್ದಾನೆ.ಬಂಧಿತಳಿದ್ದ 500 ಮುಖಬೆಲೆಯ 10 ನೋಟುಗಳು, 200 ಮುಖಬೆಲೆಯ 18 ನೋಟುಗಳು ಹಾಗೂ 100 ಮುಖಬೆಲೆಯ 2 ನೋಟುಗಳು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಕಂಪ್ಯೂಟರ್, ಪ್ರಿಂಟರ್ ಹಾಗೂ ಜೆರಾಕ್ಸ್ ಯಂತ್ರವನ್ನೂ ಕೂಡ ವಶಪಡಿಸಿಕೊಳ್ಳಲಾಗಿದೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


