ಯಾದಗಿರಿ/ಉಡುಪಿ: ಹಾವು ಕಚ್ಚಿ ಬಾಲಕ ಸಾವನಪ್ಪಿದ ಘಟನೆ ಯಾದಗಿರಿ ಜಿಲ್ಲೆ ಶಹಾಪೂರ ತಾಲೂಕಿನ ದಿಗ್ಗಿ ಗ್ರಾಮದಲ್ಲಿ ನಡೆದಿದೆ. 14 ವರ್ಷದ ಪ್ರಭು ಮೃತ ದುರ್ದೈವಿ. ರಾತ್ರಿ ಮನೆ ಹೊರಗಡೆ ಮಲಗಿದ್ದ ಬಾಲಕ ಪ್ರಭುಗೆ ಹಾವು ಕಚ್ಚಿದೆ.ಹಾವು ಕಚ್ಚಿದ ಕೂಡಲೇ ಪೋಷಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪ್ರಭು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮಗನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಭೀಮರಾಯನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೀನು ಹಿಡಿಯುವ ವೇಳೆ ವ್ಯಕ್ತಿಯೊಬ್ಬ ನೀರುಪಾಲಾದ ಘಟನೆ ಉಡುಪಿ ಜಿಲ್ಲೆಯ ಹೆಮ್ಮಾಡಿಯ ಕನ್ನಡಕುದ್ರು ಬ್ರಿಡ್ಜ್ ಬಳಿ ನಡೆದಿದೆ. 23 ವರ್ಷದ ಮಹಮದ್ ನಬಿ ಮೃತ ವ್ಯಕ್ತಿ ಅಂತ ಗುರುತಿಸಲಾಗಿದೆ. ಕನ್ನಡ ಕುದ್ರು ಸೇತುವೆಯ ಬಳಿ ಗಾಳ ಹಾಕಿ ಮೀನು ಹಿಡಿಯುವ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ.ಕುಂದಾಪುರ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಶವ ಮೇಲಕ್ಕೆತ್ತಿದೆ. ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


