ಬೆಂಗಳೂರು: ಗಣಿ ಮಾಲೀಕರ ಬಳಿ ಇರುವ ನಮ್ಮ ಜಮೀನನ್ನು ನಮಗೆ ಸಿಗದೇ ಇದ್ದರೆ ನಾವು ಸಿಎಂ ಮುಂದೆ ವಿಷ ಸೇವಿಸುವುದಾಗಿ ರೈತ ಕುಟುಂಬ ಹೇಳಿದೆ.ಜೆಪಿ ನಗರದಲ್ಲಿರುವ ಸಿಎಂ ನಿವಾಸದ ಮುಂದೆ ರಾಮನಗರ ಜಿಲ್ಲೆಯ ತೆಂಗಿನಕಲ್ಲು, ಲಂಬಾಣಿತಾಂಡ, ಅಮ್ಮನದೊಡ್ಡಿ ಗ್ರಾಮದ ನಾಗೇಶ್ ನಾಯಕ, ರಾಮಣ್ಣ ಹಾಗೂ ರಾಜುನಾಯಕ್ ಆತ್ಮಹತ್ಯೆಗೆ ಯತ್ನಿಸಿದ್ದ ರೈತರು.ನಮಗೆ ನ್ಯಾಯ ಒದಗಿಸಿಕೊಡಿ ಅಂತಾ ಆಗ್ರಹಿಸಿ, ವಿಷ ಸೇವಿಸಲು ಮುಂದಾಗಿದ್ದರು. ನಿವಾಸದಲ್ಲಿ ಮುಖ್ಯಮಂತ್ರಿ ಇಲ್ಲವೆಂದು ತಿಳಿಯುತ್ತಿದ್ದಂತೆ, ನ್ಯಾಯ ಸಿಗದೇ ಹೋದರೆ ನಾಳೆ ಮತ್ತೆ ಬಂದು ಇಲ್ಲಿಯೇ ವಿಷ ತೆಗೆದುಕೊಳ್ಳುತ್ತೇವೆ ಎಂದು ಹೇಳಿ ರೈತರು ಮರಳಿದ್ದಾರೆ.ಯಾಕೆ ವಿಷ ಸೇವನೆ?
ಬೆಂಗಳೂರು ನಿವಾಸಿ ನಂದಕುಮಾರ್ ಎಂಬವರು ಕಲ್ಲು ಗಣಿಗಾರಿಕೆಗೆ ಜಮೀನು ಬಳಸಿಕೊಂಡು ವಾಪಾಸ್ ಕೊಡುವುದಾಗಿ ಹೇಳಿ, ಅಕ್ರಮವಾಗಿ ಜಮೀನನ್ನು ಬರೆಸಿಕೊಂಡಿದ್ದಾರೆ. ಈಗ ಜಮೀನು ನನ್ನದೇ ಎಂದು ಹೇಳಿ, ಬೇರೆಯವರಿಗೆ ಮಾರಲು ಮುಂದಾಗಿದ್ದಾರೆ. ರಾಮನಗರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಮೂರು ಕುಟುಂಬದ ಜಮೀನನ್ನು ನಂದಕುಮಾರ್ ಪಡೆದು ಮೋಸ ಮಾಡಿದ್ದಾರೆ ರೈತರು ಆರೋಪಿಸಿದ್ದಾರೆ.Sign in to your account
Username or Email Address


Password

 Remember Me


