ಬಾಗಲಕೋಟೆ: ಈಜಲು ಬಾರದೇ ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಗ್ರಾಮದಲ್ಲಿ ನಡೆದಿದೆ.ಸುಹಾಸ್ ನೀಲಣ್ಣವರ (15), ಮೇಘರಾಜ ಪತ್ತಾರ (14) ಮೃತಪಟ್ಟ ಬಾಲಕರು. ಸ್ನಾನ ಮಾಡಲು ಹೋಗಿ ಈ ಅವಘಡ ನಡೆದಿದೆ. ಶನಿವಾರ ಬಾಲಕರು ಮನೆಗೆ ಬಾರದೇ ಇದ್ದ ಕಾರಣ ಪೋಷಕರು ಪೊಲೀಸರ ಮೊರೆ ಹೋಗಿದ್ದರು. ಬಳಿಕ ಪೊಲೀಸರು ತಡರಾತ್ರಿ ಹುಡುಕಾಟ ನಡೆಸಿ ಕೃಷಿ ಹೊಂಡದಿಂದ ಇಬ್ಬರು ಬಾಲಕರ ಶವವನ್ನು ಹೊರತೆಗೆದಿದ್ದಾರೆ.ಈ ಸಂಬಂಧ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


