ಬೆಂಗಳೂರು: ಹೆಲ್ಮೆಟ್ ಧರಿಸದೇ ತ್ರಿಬಲ್ ರೈಡ್ ಮಾಡುತ್ತಿದ್ದರನ್ನು ಪ್ರಶ್ನಿಸಿದ್ದ ಎಎಸ್‍ಐ ಮೇಲೆ ಪುಡಿ ರೌಡಿಗಳು ಲಾಂಗ್ ಬೀಸಿ ಹಲ್ಲೆಗೆ ಯತ್ನಿಸಿದ್ದಾರೆ.ಬೆಂಗಳೂರಿನ ವಿಜಯನಗರ ಟ್ರಾಫಿಕ್ ಎಎಸ್‍ಐ ಮುನಿಮಾರೇಗೌಡ ಎಂಬವರ ಮೇಲೆ ರೌಡಿ ಶೀಟರ್ ಅಸ್ಗರ್ ಎಂಬಾತ ಲಾಂಗ್ ಬೀಸಿದ್ದಾನೆ. ಮುನಿಮಾರೇಗೌಡ್ರು ಶುಕ್ರವಾರ ಟೆಲಿಕಾಂ ಲೇಔಟ್ ಬಳಿಯ ಕುವೆಂಪು ಸರ್ಕಲ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಸ್ಕೂಟಿಯಲ್ಲಿ ಹೆಲ್ಮೆಟ್ ಧರಿಸದೇ ಬಂದ ಮೂವರನ್ನು ಮುನಿಮಾರೇಗೌಡ್ರು ತಡೆದು ಪ್ರಶ್ನಿಸಿದ್ದಾರೆ.  ಈ ವೇಳೆ ತಮ್ಮನ್ನು ತಡೆಯಲು ಮುಂದಾದ ಎಎಸ್‍ಐ ಮೇಲೆ ಸ್ಕೂಟಿಯಲ್ಲಿದ್ದ ಅಸ್ಗರ್ ಎಂಬಾತ ಲಾಂಗ್ ಬೀಸಿದ್ದಾನೆ.ಎಎಸ್‍ಐ ರೌಡಿಗಳ ಲಾಂಗ್ ನಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ. ಎಎಸ್‍ಐ ಮೇಲೆ ಹಲ್ಲೆಗೆ ಯತ್ನಿಸ್ತಿದ್ದಾರಲ್ಲಾ ಅಂತಾ, ಜನ ಹತ್ತಿರಕ್ಕೆ ಬರುತ್ತಿದ್ದ ಹಾಗೆ ಮೂವರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಕೂಡಲೇ ಕಂಟ್ರೋಲ್ ರೂಂಗೆ ಮಾಹಿತಿ ನೀಡಿ ನಾಕಾಬಂದಿ ಹಾಕಿ ಟೂ ವೀಲರ್ ಮತ್ತು ಒಬ್ಬ ಆರೋಪಿಯನ್ನ ವಿಜಯನಗರ ಲಾ ಅಂಡ್ ಆರ್ಡರ್ ಪೊಲೀಸ್ರು ಬಂಧಿಸಿದ್ದು, ರೌಡಿ ಅಸ್ಗರ್ ತಪ್ಪಿಸಿಕೊಂಡಿದ್ದಾನೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


